ಕೋಟಿ-ಕೋಟಿ ವಿಚಾರ, ವಿರೂಪಾಕ್ಷಪ್ಪ ವಿಚಾರಣೆ ಬಳಿಕ ಸತ್ಯ ತಿಳಿಯಲಿದೆ: ಆರಗ ಜ್ಞಾನೇಂದ್ರ

Public TV
1 Min Read

ಶಿವಮೊಗ್ಗ: ಚನ್ನಗಿರಿ (Channagiri) ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರನ ಮನೆ ಮೇಲೆ ಲೋಕಾಯುಕ್ತ (Lokayukta) ದಾಳಿ ನಡೆಸಿ, ಹಣ ವಶಪಡಿಸಿಕೊಂಡ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಆದರೆ ಅವರ ಮನೆಯಲ್ಲಿ ಸಿಕ್ಕಿದ್ದು ಯಾವ ಹಣ ಎಂಬುದು ವಿಚಾರಣೆ ನಂತರ ಸತ್ಯ ಹೊರಬರಲಿದೆ. ಈಗಲೇ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಇದನ್ನೂ ಓದಿ: ಮಗ ಮಾಡಿದ ತಪ್ಪಿಗೆ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು: ಮಾಧುಸ್ವಾಮಿ ಪ್ರಶ್ನೆ

ಜಿಲ್ಲೆಯ ಮತ್ತೂರಿನಲ್ಲಿ (Mattur) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ವಿಚಾರ ಈಗ ವಿಚಾರಣೆ ಹಂತದಲ್ಲಿದೆ. ಈಗಾಗಲೇ ನಾಲ್ಕೈದು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಬಳಿಕ ಹಣದ ವಿಚಾರ ಸ್ಪಷ್ಟವಾಗಲಿದೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ 500 ರೂ. ಕೊಟ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೆಲವೊಮ್ಮೆ ಸತ್ಯ ಹೇಳುತ್ತಾರೆ. ಕಾಂಗ್ರೆಸ್ ನ ಸಮಾವೇಶಕ್ಕೆ ಹಣ ನೀಡಿ ಜನರನ್ನು ಕರೆದುಕೊಂಡು ಬರುವುದು ದುರಂತ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

Share This Article
Leave a Comment

Leave a Reply

Your email address will not be published. Required fields are marked *