ಫೋಟೋ ಶೂಟ್ ನಲ್ಲಿ ಆರಾಧನಾ ರಾಮ್: ಹೊಸ ಸಿನಿಮಾ ಸುಳಿವು

Public TV
1 Min Read

ಕಾಟೇರ (Katera) ಸಿನಿಮಾದ ನಂತರ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana) ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕಾಟೇರ ಅದ್ಭುತ ಯಶಸ್ಸು ಕಂಡರೂ, ನಾಯಕಿಯ ಮತ್ತೊಂದು ಸಿನಿಮಾ ಘೋಷಣೆ ಆಗದೇ ಇರುವುದಕ್ಕೆ ಹಲವಾರು ಚರ್ಚೆಗಳು ಕೂಡ ನಡೆದಿವೆ. ಕಾಟೇರ ಗೆಲುವಿನ ನಂತರವೂ ಅವರಿಗೆ ಅವಕಾಶ ಸಿಕ್ಕಿಲ್ಲ ಎನ್ನುವ ಮಾತು ಕೇಳಿ ಬಂದಿವೆ.

ಆರಾಧನಾ ಆಪ್ತರ ಮಾಹಿತಿಯ ಪ್ರಕಾರ ಕಾಟೇರ ನಂತರ ಸಾಕಷ್ಟು ಅವಕಾಶಗಳು ಬಂದಿವೆ ಅಂತೆ. ಆದರೆ, ಅಳೆದು ತೂಗಿ ಪಾತ್ರಗಳನ್ನು ಮತ್ತು ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ ಆರಾಧನಾ ರಾಮ್. ಹೊಸ ಸಿನಿಮಾದ ಪಾತ್ರಕ್ಕಾಗಿಯೂ ಅವರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರಂತೆ.

ಕಾಟೇರ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಟೆಂಪಲ್ ರನ್ ಮಾಡಿದ್ದ ಆರಾಧನಾ, ಆನಂತರ ಸೀರಿಯಸ್ ಆಗಿ ಹಲವು ಕಥೆಗಳನ್ನು ಕೇಳಿದ್ದಾರಂತೆ. ಜೊತೆಗೆ ಮತ್ತಷ್ಟು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರಂತೆ.

 

ಸದ್ಯ ಆರಾಧನಾ ಫೋಟೋ ಶೂಟ್ ನಲ್ಲಿ ಭಾಗಿ ಆಗಿದ್ದು, ಆ ಫೋಟೋಗಳು ಸಿನಿಮಾಗಳ ಒಂದೊಂದು ಲುಕ್ ಟೆಸ್ಟ್ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

Share This Article