ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಮೂಲ ವೃಂದಾವನಕ್ಕೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

By
1 Min Read

– ರಾಯರ ವೃಂದಾವನ ಶಿಲಾ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಕೆ

ರಾಯಚೂರು: ಮಂತ್ರಾಲಯದಲ್ಲಿ (Mantralaya) ಗುರುರಾಯರ 354ನೇ ಆರಾಧನಾ ಮಹೋತ್ಸವ (Aradhana Mahotsava) ಸಂಭ್ರಮ ಮನೆಮಾಡಿದೆ. ಆರಾಧನಾ ಮಹೋತ್ಸವದ ಎರಡನೇ ದಿನವಾದ ಇಂದು ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ಭಕ್ತಿ ಸಡಗರದಿಂದ ನಡೆದಿವೆ.

ರಾಯರ ವೃಂದಾವನ ಮುಂದಿನ ಎರಡು ಶಿಲಾ ಸ್ತಂಭಗಳಿಗೆ ಸುವರ್ಣ ಲೇಪಿತ ಕವಚ ಅಳವಡಿಸಲಾಗಿದೆ. ಗುರು ರಾಯರ ಭಕ್ತರ ದೇಣಿಗೆಯಿಂದ ತಯಾರಿಸಿದ ಕವಚಗಳು ಮೊದಲ ಬಾರಿಗೆ ಅಳವಡಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ತಿರುಪತಿ ತಿರುಮಲ ದೇವಾಲಯದಿಂದ ಶ್ರೀನಿವಾಸ ದೇವರ ಶೇಷವಸ್ತ್ರ ಮಂತ್ರಾಲಯಕ್ಕೆ ಬಂದಿದ್ದು, ಮಠದ ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರೆಡ್ ಅಲರ್ಟ್ ಘೋಷಣೆ, 100

ಮಂಚಾಲಮ್ಮದೇವಿಗೆ ಸೀರೆ ಸಮರ್ಪಣೆ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಶೇಷವಸ್ತ್ರ ಸ್ವೀಕರಿಸಿ ರಾಯರ ವೃಂದಾವನಕ್ಕೆ ಸಮರ್ಪಿಸಿದ್ದಾರೆ. ಬೆಳಗಿನ ಜಾವದಿಂದ ವಿಶೇಷ ಪೂಜೆಗಳು ನಡೆಯುತ್ತಿದ್ದು, ಶಾಖೋತ್ಸವ, ರಜಮಂಟಪೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ಜರುಗುತ್ತಿವೆ. ಆಗಸ್ಟ್ 8 ರಿಂದ 14ರವರೆಗೆ ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದನ್ನೂ ಓದಿ: ಗದಗ | ಐಪಿಎಸ್ ಅಧಿಕಾರಿಯ ಸಹೋದರನ ದರ್ಪ – ಕುಡಿದ ಮತ್ತಲ್ಲಿ ಠಾಣೆಗೆ ನುಗ್ಗಿ ರಂಪಾಟ

Share This Article