ನೂಪುರ್ ಶರ್ಮಾ ವಿರುದ್ಧ ಕತಾರ್ ಕಿಡಿ – ಟ್ರೆಂಡಿಂಗ್ ಆಯ್ತು #BycottQatarAirways ಅಭಿಯಾನ

Public TV
2 Min Read

ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಇದೀಗ ಭಾರತ ಹಾಗೂ ಅರಬ್ ದೇಶಗಳ ಮಧ್ಯೆ ತಿಕ್ಕಾಟ ತಾರಕಕ್ಕೇರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್‍ಕಾಟ್ ಕೂಗು ಕೇಳಿಬರುತ್ತಿದೆ.

ನೂಪುರ್ ಶರ್ಮಾ, ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಅವರ ಪತ್ನಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರಂಭಗೊಂಡ ವಿವಾದ ಬಳಿಕ ನೂಪುರ್ ಶರ್ಮಾರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸುವ ಮಟ್ಟಿಗೆ ಮುಂದುವರಿದಿತ್ತು. ಆ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

ನೂಪುರ್ ಶರ್ಮಾ ಕೇವಲ ಉದಾಹರಣೆಯಾಗಿ ಪ್ರವಾದಿ ಮೊಹಮ್ಮದ್ ಕುರಿತಾಗಿ ಮಾತನಾಡಿದ್ದಾರೆ. ಹೊರತು ಅವಹೇಳನಕಾರಿ ಮಾಡಿಲ್ಲ ಎಂದು ನೂಪುರ್ ಶರ್ಮಾರ ಹೇಳಿಕೆ ಪರ ಧ್ವನಿ ಕೇಳಿ ಬರುತ್ತಿದೆ. ಈ ನಡುವೆ ಅರಬ್ ದೇಶಗಳಾದ ಕತಾರ್, ಓಮನ್, ಸೌದಿ ಅರೇಬಿಯಾದಲ್ಲಿ ಭಾರತದಿಂದ ರಫ್ತಾಗುತ್ತಿರುವ ಸರಕುಗಳು ಸೇರಿದಂತೆ ಆಹಾರ ಉತ್ಪನ್ನಗಳನ್ನು ಖರೀದಿಸದಂತೆ ಬಾಯ್‍ಕಾಟ್ ಚಳವಳಿ ಆರಂಭವಾಗಿದೆ. ಈ ನಡುವೆ ಭಾರತದಲ್ಲಿ ಕಾರ್ಯಚರಿಸುತ್ತಿರುವ ಕತಾರ್ ಏರ್ವೇಸ್‍ಗೆ ಬಹಿಷ್ಕಾರ ಹಾಕಿ. ನಾವು ಅರಬ್ ದೇಶಗಳ ಯಾವುದೇ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂಬ ಅಭಿಯಾನ ಭಾರತದಲ್ಲಿ ಆರಂಭವಾಗಿದೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

https://twitter.com/ALoanIndian/status/1533486948161323008

ಭಾರತೀಯರ ವಾದವೇನು?
ನಮ್ಮ ಹಿಂದೂ ದೇವರುಗಳನ್ನು ಮಾತ್ರವಲ್ಲದೆ ನಮ್ಮ ಭಾರತ ಮಾತೆಯನ್ನು ಅವಮಾನಿಸಿದ ಎಂ.ಎಫ್ ಹುಸೇನ್‍ಗೆ ಕತಾರ್ ಪೌರತ್ವ ನೀಡಿದೆ. ಈ ಬಗ್ಗೆ ಕ್ಷಮೆಯಾಚಿಸಬೇಕು. ಹುಸೇನ್ ಭಾರತ ಮಾತೆಯ ನಗ್ನ ಚಿತ್ರಕಲೆ ಬಿಡಿಸಿ ಅವಮಾನ ಮಾಡಿದ್ದ ಅಂತವರಿಗೆ ಪೌರತ್ವ ನೀಡಿದೆ. ಆದರೆ ನೂಪುರ್ ಶರ್ಮಾ ಕೇವಲ ಉದಾಹರಣೆಗಾಗಿ ಪ್ರವಾದಿ ಮೊಹಮ್ಮದ್ ಕುರಿತಾಗಿ ಆಡಿದ ಮಾತಿಗೆ ಈ ರೀತಿಯ ಪ್ರತಿಕಾರ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

https://twitter.com/DivyaRajput060/status/1533737481798942722

ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಧನಸಹಾಯವನ್ನು ಸೌದಿ ಸ್ಥಗಿತಗೊಳಿಸಿದ ನಂತರ ಕತಾರ್ ಭಾರತದಲ್ಲಿ ಇಸ್ಲಾಮಿ ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕವಾಗಿ ಹೊರಹೊಮ್ಮುತ್ತಿದೆ. ಕತಾರ್ ಮತ್ತು ಟರ್ಕಿ ಸೌದಿ ಅರೇಬಿಯಾವನ್ನು ವಿಶ್ವದ ಹೊಸ ಇಸ್ಲಾಮಿಸ್ಟ್ ನಾಯಕನಾಗಿ ಬದಲಾಯಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಇದನ್ನೂ ಓದಿ: ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ

ಗಲ್ಫ್ ದೇಶಗಳ ಪ್ರಮುಖ ಆದಾಯದ ಮೂಲ ಪ್ರವಾಸೋದ್ಯಮ. ನಮ್ಮ ದೇಶದ ವಿಚಾರಕ್ಕೆ ತಲೆ ಹಾಕಿದ್ದಕ್ಕೆ ಅಲ್ಲಿನ ವಿಮಾನ ಸೇವೆಯ ಬಳಸಬಾರದು. ಜೊತೆ ಆ ದೇಶಗಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *