ಇಂದು 18 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆ

Public TV
3 Min Read

– ಬೆಂಗ್ಳೂರಿನಲ್ಲಿ ಇಂದು 10 ಜನರಿಗೆ ಕೊರೊನಾ
– ರೋಗಿ 419ರಿಂದ 9 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 18 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 10 ಜನರಿಗೆ ಕೊರೊನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ಬೆಂಗಳೂರಿನ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನ ಹೊಂಗಸಂದ್ರದ ಬಿಹಾರ ಮೂಲಕ ಕಾರ್ಮಿಕ (ರೋಗಿ ನಂಬರ್ 419) ಸಿಲಿಕಾನ್ ಸಿಟಿಗೆ ಕಂಟಕವಾಗುತ್ತಾ ಅನ್ನೋ ಅನುಮಾನಗಳು ದಟ್ಟವಾಗಿವೆ. ಕೂಲಿ ಕಾರ್ಮಿಕನ ಸಂಪರ್ಕದಲ್ಲಿದ್ದ 9 ಜನರಿಗೆ ಇಂದು ಕೊರೊನಾ ತಗುಲಿರುವುದು ದೃಢಪಟ್ಟಿದೆ. ತಡರಾತ್ರಿ ಕಾರ್ಯಚರಣೆ ನಡೆಸಿದ ಆರೋಗ್ಯ ಜಲ್ಲಾಧಿಕಾರಿಗಳು 118 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ.

ನಂಜನಗೂಡಿನ ರೋಗಿ ನಂಬರ್ 52ರಂತೆ ಬಿಹಾರ ಕಾರ್ಮಿಕ ಬೆಂಗಳೂರಿಗೆ ಕಂಟಕವಾಗುವ ಸಾಧ್ಯತೆಗಳಿವೆ. ಸೋಂಕು ತಗುಲಿದ ಬಳಿಕ ಕಾರ್ಮಿಕ ಆಟೋದಲ್ಲಿ ಹೊಂಗಸಂದ್ರದ ವೇಣು ಕ್ಲಿನಿಕ್, ಜಯದೇವ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಿಗೆ ತೆರಳಿದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕರ್ನಾಟಕದ ಎಲ್ಲಾ ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆಯ ಫಾರ್ಮಸಿಸ್ ಅವರು ಔಷಧಿ ಕೊಡುವಾಗ ಆಡ್ರೆಸ್, ಮೊಬೈಲ್ ನಂಬರ್ ಕಲೆಕ್ಟ್ ಮಾಡಲು ಸೂಚನೆ ಕೊಡಲಾಗಿದೆ. ಕೆಮ್ಮು, ನಗಡಿ, ಗಂಟಲು ನೋವಿಗೆ ಕೊಡುವಾಗ ಕಲೆಕ್ಟ್ ಮಾಡಬೇಕು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕಿತರ ವಿವರ:
ರೋಗಿ 428 : 32 ವರ್ಷದ ಪುರುಷ, ವಿಜಯಪುರದ ನಿವಾಸಿ. ರೋಗಿ-221ರ ಸಂಪರ್ಕದಲ್ಲಿದ್ದರು.
ರೋಗಿ 429: 25 ವರ್ಷದ ಮಹಿಳೆ, ವಿಜಯಪುರದ ನಿವಾಸಿ. ಸಂಪರ್ಕ ಇನ್ನು ಪತ್ತೆಯಾಗಿಲ್ಲ.
ರೋಗಿ 430: 30 ವರ್ಷದ ಮಹಿಳೆ, ಹುಬ್ಬಳ್ಳಿಯ ನಿವಾಸಿ. ರೋಗಿ-236ರ ಸಂಪರ್ಕ ಹೊಂದಿದ್ದರು.
ರೋಗಿ 431: 13 ವರ್ಷದ ಬಾಲಕಿ, ಹುಬ್ಬಳ್ಳಿಯ ನಿವಾಸಿ. ರೋಗಿ-236ರ ಸಂಪರ್ಕದಲ್ಲಿದ್ದರು.
ರೋಗಿ 432: 78 ವರ್ಷದ ವೃದ್ಧೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ. ರೋಗಿ-390ರ ಸಂಪರ್ಕ ಹೊಂದಿದ್ದರು.
ರೋಗಿ 433: 30 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿದ್ದರು.

ರೋಗಿ 434: 60 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕ ಹೊಂದಿದ್ದರು.
ರೋಗಿ 435: 22 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ 436: 40 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿ ಇದ್ದರು.
ರೋಗಿ 437: 30 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕ ಹೊಂದಿದ್ದರು.
ರೋಗಿ 438: 25 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ 439: 37 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿ ಇದ್ದರು.

ರೋಗಿ 440: 43 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ 441: 41 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-419ರ ಸಂಪರ್ಕ ಹೊಂದಿದ್ದರು.
ರೋಗಿ 442: 47 ವರ್ಷದ ಪುರುಷ, ಮಂಡ್ಯ ನಿವಾಸಿ. ರೋಗಿ-171 ಮತ್ತು 371ರ ಸಂಪರ್ಕದಲ್ಲಿದ್ದರು.
ರೋಗಿ 443: 28 ವರ್ಷದ ಮಹಿಳೆ, ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ. ರೋಗಿ-179ರ ಸಂಪರ್ಕದಲ್ಲಿ ಇದ್ದರು.
ರೋಗಿ 444: 41 ವರ್ಷದ ಪುರುಷ, ಬೆಂಗಳೂರಿನ ನಿವಾಸಿ. ರೋಗಿ-252ರ ಸಂಪರ್ಕದಲ್ಲಿದ್ದರು.
ರೋಗಿ 445: 32 ವರ್ಷದ ಮಹಿಳೆ, ಕಲಬುರಗಿ ನಿವಾಸಿ. ರೋಗಿ-413ರ ಸಂಪರ್ಕ ಹೊಂದಿದ್ದರು.

ಬೆಂಗಳೂರಿನಲ್ಲಿ 10, ವಿಜಯಪುರ, ಹುಬ್ಬಳ್ಳಿ ಮತ್ತು ಮಂಡ್ಯದಲ್ಲಿ ತಲಾ ಇಬ್ಬರು ಸೋಂಕಿತರು ಪತ್ತೆಯಾದರೆ, ದಕ್ಷಿಣ ಕನ್ನಡ ಹಾಗೂ ಕಲಬುಗಿಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ವಿಜಯಪುರದ ರೋಗಿ ನಂಬರ್ 429, 25 ವರ್ಷದ ಮಹಿಳೆಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *