ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

By
1 Min Read

ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ ಗಂಧದ ಗುಡಿ ಟೀಸರ್ ಇಂದು ಬಿಡುಗಡೆಯಾಗಿದ್ದು, ಈ ದೃಶ್ಯಗಳ ಚಿತ್ರೀಕರಣಕ್ಕಾಗಿ ಅಪ್ಪು ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ದರು.

ಅಪ್ಪು ಗಂಧದ ಗುಡಿ ಚಿತ್ರೀಕರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಜೋಯಿಡಾ, ದಾಂಡೇಲಿ ಭಾಗದ ಅರಣ್ಯ ಹಾಗೂ ಸಮುದ್ರದಾಳದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಹಿನ್ನೆಲೆ ಪುನೀತ್ ಅವರು ಸಮುದ್ರದಾಳದಲ್ಲಿ ಸ್ಕೂಬಾ ಡೈವ್ ಮಾಡುವ ಮೂಲಕ ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇದಕ್ಕಾಗಿ ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಲ್ಲಿ ಸ್ಕೂಬಾ ಡೈವ್ ತರಬೇತಿ ಪಡೆದುಕೊಂಡಿದ್ದರು ಎಂಬ ಸುದ್ದಿ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ 

ಅರಬ್ಬಿ ಸಮುದ್ರದ ನೇತ್ರಾಣಿ ದ್ವೀಪದ ಹತ್ತು ಮೀಟರ್ ಆಳದಲ್ಲಿ ಪುನೀತ್ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಸ್ಕೂಬಾ ಡೈವ್ ಮಾಡಿದ್ದಾರೆ. ಎರಡು ದಿನ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿದ್ದ ಅವರು, ಸಮುದ್ರದಾಳದಲ್ಲಿ ಗಂಟೆಗಳ ಕಾಲ ಈಜಾಡಿ ಸಮುದ್ರ ಗರ್ಭದಲ್ಲಿರುವ ಅಪರೂಪದ ಹವಳದ ದಿಬ್ಬಗಳು, ಮೀನುಗಳನ್ನು ಚಿತ್ರೀಕರಿಸಿದ್ದಾರೆ.

ಈ ಕುರಿತು ಪುನೀತ್ ಅವರಿಗೆ ತರಬೇತಿ ನೀಡಿದ ಹಾಗೂ ಅವರೊಂದಿಗೆ ಸ್ಕೂಬಾ ಡೈ ಮಾಡಿದ ನೇತ್ರಾಣಿ ಅಡ್ವೇಂಚರ್ ತರಬೇತುದಾರ ಗಣೇಶ್ ಹರಿಕಾಂತ್ರ ಅವರು ಪುನೀತ್ ಅವರ ಸಮುದ್ರದಾಳದ ಸಾಹಸ ಕುರಿತು ಹಂಚಿಕೊಂಡಿದ್ದಾರೆ. ಅವರಿಗಿದ್ದ ಪರಿಸರ ಪ್ರೇಮ ಹಾಗೂ ತಮ್ಮ ಕನಸನ್ನು ಅವರು ತಿಳಿಸಿದ್ದರು. ಅವರು ಪ್ರವಾಸೋದ್ಯಮ ಅಭಿವೃದ್ಧಿ ಕನಸು ಕಂಡಿದ್ದರು ಎಂದು ಹಿಂದೆ ಪುನೀತ್ ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

Share This Article
Leave a Comment

Leave a Reply

Your email address will not be published. Required fields are marked *