ಅಪ್ಪು ಆ್ಯಪ್ ಟ್ರೈಲರ್ ಬಗ್ಗೆ ಸಿಹಿ ಸುದ್ದಿ ಕೊಟ್ಟ ಅಶ್ವಿನಿ ಪುನೀತ್‌ ರಾಜ್‍ಕುಮಾರ್

Public TV
1 Min Read

ವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದು ಸಿಕ್ಕಿದೆ. ಅಪ್ಪು ಸಮಗ್ರ ಮಾಹಿತಿ ಕುರಿತಾದ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆ ಪವರ್ ಫುಲ್ ಟ್ರೈಲರ್ ಲಾಂಚ್ ಮಾಡೋಕೆ ಸಿದ್ಧತೆ ನಡೆದಿದೆ. ಅದರ ಒಂದು ಸಣ್ಣ ಝಲಕ್‌ನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ ಅವರೇ ಸ್ವತಃ ಧ್ವನಿ ನೀಡಿದ್ದಾರೆ.

ಅಪ್ಪು ಕನಸು ನನಸಾಗುವ ಸಮಯ ಬಂದಿದೆ. ಹೊಸ ಬೆಳಕಿನೊಂದಿಗೆ ಪಿಆರ್ ಕೆ ಹೊಸ ಹೆಜ್ಜೆಯನ್ನ ಇಟ್ಟಿದೆ. ಅಭಿಮಾನ, ನಗು, ನೆನಪು ಒಂದೇ ವೇದಿಕೆಯಲ್ಲಿ ದೊರೆಯಲಿದೆ. ಇದೇ ಶನಿವಾರ ಅಕ್ಟೋಬರ್ 18ರಂದು ಅಪ್ಪು ಆ್ಯಪ್ ಟ್ರೈಲರ್ ರಿಲೀಸ್ ಆಗುವ ಸಿಹಿ ಸುದ್ದಿಯನ್ನ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿಯಲ್ಲಿ ಅಪ್ಪು

ಅಂದ ಹಾಗೆ ಅಪ್ಪು ಆ್ಯಪ್‌ನ್ನು ಸನ್ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅನಾವರಣ ಮಾಡಲಿದ್ದಾರೆ. ಅದಕ್ಕೂ ಮೊದಲು ಅಪ್ಪು ಆ್ಯಪ್ ಟ್ರೈಲರ್ ಅಕ್ಟೋಬರ್ 18ರಂದು ಬೆಳಗ್ಗೆ 11:55ಕ್ಕೆ ರಿಲೀಸ್ ಆಗಲಿದೆ. ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಪವರ್ ಫುಲ್ ಟ್ರೈಲರ್‌ಗೆ ಕ್ಷಣಗಣನೆ ಇಲ್ಲಿಂದ ಶುರುವಾಗಿದೆ. ಆ್ಯಪ್ ಹೇಗಿರಲಿದೆ..? ಏನೆಲ್ಲ ಮಾಹಿತಿಗಳು ಅದರಲ್ಲಿ ದೊರೆಯಲಿವೆ ಎಂಬ ಎಲ್ಲಾ ಮಾಹಿತಿ ಟ್ರೈಲರ್ ಇರಲಿದೆ. ಇದನ್ನೂ ಓದಿ: ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು

Share This Article