ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

Public TV
2 Min Read

ರೀಲ್ಸ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಸದ್ದು. ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಚಿತ್ರದ ಈ ಹಾಡಿಗೆ ದೇಶ-ವಿದೇಶದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ದೇಶ ಮಾತ್ರವಲ್ಲದೇ ವಿದೇಶದಿಂದಲೂ ಈ ಹಾಡನ್ನು ಮೆಚ್ಚಿಕೊಂಡಿದ್ದು ‘ತೋತಾಪುರಿ’ ಹೆಚ್ಚುಗಾರಿಕೆ. ಇದನ್ನೂ ಓದಿ : ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

`ಬಾಗ್ಲು ತೆಗಿ ಮೇರಿ ಜಾನ್‌’ ಹಾಡು 100 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.  ಈ ಹಾಡಿಗೆ ಪ್ರಸ್ತುತ ಚಾನಲ್‌ವೊಂದರಲ್ಲೇ 15 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿರುವುದು `ತೋತಾಪುರಿ’ ಹೆಚ್ಚುಗಾರಿಕೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಲೇ ಇದೆ. ಯೂ ಟ್ಯೂಬ್‌ ರೀಲ್ಸ್, ಶಾರ್ಟ್ಸ್ ಹಾಗೂ ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡಾನ್ಸ್ ಮಾಡಿ ಅಪ್ಲೋಡ್‌ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು `ತೋತಾಪುರಿ’ ಹಾಡಿನ ವಿಶೇಷ.

ತೋತಾಪುರಿ ಚಿತ್ರದ ಹಾಡು, ಮೇಕಿಂಗ್ ಹಾಗೂ ತಂಡದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿರುವ ಜಗ್ಗೇಶ್, ಈ ಸಿನಿಮಾಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಇನ್ನು ‘ಬಾಗ್ಲು ತೆಗಿ ಮೇರಿ ಜಾನ್’ಗೆ ದುಬೈ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು ಈ ಕಾರ್ಯಕ್ರಮದ ವಿಶೇಷ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

ಇತ್ತೀಚೆಗಷ್ಟೇ ಅಮೆರಿಕಾ ನೆರೆಹೊರೆಯ ರಾಷ್ಟ್ರದ ಅನಿವಾಸಿ ಕನ್ನಡಿಗರೊಂದಿಗೆ ವರ್ಚುವಲ್ ಮಾತುಕತೆ ನಡೆಸಿದ್ದ ಜಗ್ಗೇಶ್, ಇದೀಗ ಗಲ್ಫ್ ಕನ್ನಡಿಗರೊಂದಿಗೂ ‘ತೋತಾಪುರಿ’ ಬಗ್ಗೆ ವಿಶೇಷವಾಗಿ ವಿಷಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

ಈಗಾಗಲೇ ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿರುವ ಈ ಚಿತ್ರದ ಹಾಡಿಗೆ ಎಲ್ಲರೂ ತಲೆದೂಗಿಸುತ್ತಿದ್ದಾರೆ. ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶಿಸಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎರಡು ಭಾಗಗಳಲ್ಲಿ ತೋತಾಪುರಿ ತೆರೆಕಾಣಲಿರುವುದು ವಿಶೇಷ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ಅದಿತಿ ಪ್ರಭುದೇವ, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *