– 10 ವರ್ಷಕ್ಕೆ 1,000 ಕೋಟಿ ರೂ. ವೆಚ್ಚ
ನವದೆಹಲಿ: ಐಫೋನ್ ತಯಾರಕ ಆ್ಯಪಲ್ (Apple) ಕಂಪನಿ ಬೆಂಗಳೂರಿನ ಡೌನ್‌ಟೌನ್‌ನಲ್ಲಿರುವ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಸುಮಾರು 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಕಾಲ ಲೀಸ್‌ಗೆ (Lease) ಪಡೆದಿದ್ದು, ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ (Rent) ಪಾವತಿಸಲಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.
ಬೆಂಗಳೂರಿನ ವಸಂತ ನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬೆಸಿ ಜೆನಿತ್ ಕಟ್ಟಡದ 5ರಿಂದ 13ನೇ ಮಹಡಿಯಲ್ಲಿ ಆಪಲ್‌ನ ಹೊಸ ಕಚೇರಿಯಿದೆ. ಈ ಎಲ್ಲ ಮಹಡಿಗಳಿಗೆ ಕಂಪನಿಯು ಪಾರ್ಕಿಂಗ್, ನಿರ್ವಹಣಾ ಶುಲ್ಕಾ ಸೇರಿದಂತೆ ಮಾಸಿಕ 6.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಚದರ ಅಡಿಗೆ 235 ರೂ. ಬಾಡಿಗೆ ಬೀಳಲಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ
ರಿಯಲ್ ಎಸ್ಟೇಟ್ ಸಂಸ್ಥೆ ಎಂಬಸಿ ಗ್ರೂಪ್‌ನಿಂದ (Embassy Group) ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಬಹು ಮಹಡಿ ಕಟ್ಟಡವನ್ನು ಆ್ಯಪಲ್ ಕಂಪನಿ 10 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದೆ. ಆ್ಯಪಲ್ ಕಂಪನಿ 31.57 ಕೋಟಿ ರೂ. ಭದ್ರತಾ ಠೇವಣಿ ಇಟ್ಟಿದೆ. ವಾರ್ಷಿಕ ಬಾಡಿಗೆ 4.5%ರಷ್ಟು ಹೆಚ್ಚಳವಾಗಲಿದೆ. ಈ ವರ್ಷದ ಏಪ್ರಿಲ್ 3ರಿಂದ ಲೀಸ್ ಪ್ರಾರಂಭವಾಗಿದ್ದು, ಜುಲೈನಲ್ಲಿ ನೋಂದಾಯಿಸಲಾಗಿದೆ. ಆಪಲ್ 1.5 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಎಸ್‌ಸಿ ಒಳಮೀಸಲಾತಿ ಜಾರಿಗೆ ವಿಶೇಷ ಸಭೆ; 101 ಜಾತಿಗಳಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ
2024-25ರ ಆರ್ಥಿಕ ವರ್ಷದಲ್ಲಿ ಆ್ಯಪಲ್ ಕಂಪನಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್ ಕಟ್?