ಮದುವೆ ಆಗ್ತೀನಿ, ರಿಲೇಷನ್‌ಶಿಪ್‌ನಲ್ಲಿ ಇರ್ತೀನಿ ಅಂತ ಇನ್ನೂ ಮೂವರಿಗೆ ಮೋಸ ಮಾಡಿದ್ದಾಳೆ: ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ

Public TV
3 Min Read

– ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿರುದ್ಧ ನಿರ್ಮಾಪಕ ರೆಡ್ಡಿ ಆರೋಪ ಏನು?

ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಮೇಲೆ ನಟಿ ಆರೋಪಗಳನ್ನ ಹೊರೆಸಿದ್ದರು. ಈ ಸಂಬಂಧ ಅರವಿಂದ್ ರೆಡ್ಡಿ ಬಂಧನಕ್ಕೊಳಗಾಗಿ ಬೇಲ್ ಮೇಲೆ ಆಚೆ ಬಂದಿದ್ದಾರೆ. ಇದೀಗ ಇವೆಲ್ಲ ಆರೋಪಗಳಿಗೆ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಜೊತೆಗೆ ಹಲವಾರು ವಿಚಾರಗಳ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಅರವಿಂದ್ ರೆಡ್ಡಿ ಮಾತನಾಡಿದ್ದಾರೆ. ಅವರ ಹತ್ತಿರ ಏನಾದ್ರು ಪ್ರೂಫ್ ಇದ್ರೆ ಕೊಡಲಿ. ಕಾರು ಒಂದು ವಾಪಾಸ್ ಕೊಟ್ಟಿದ್ದಾರೆ. ನನ್ನ ಕೈಯಲ್ಲಿ ಆಗೋದೆಲ್ಲ ಕೊಟ್ಟಿದ್ದೀನಿ ಅಂತಾ ಅವ್ರೆ ಒಪ್ಪಿಕೊಂಡಿದ್ದಾರೆ. ನನ್ ಕಡೆ ಆಗದೇ ಇರೋದನ್ನೆಲ್ಲ ಎಲ್ಲಿಂದ ತಂದು ಕೊಡ್ಲಿ ಅಂತ ಹೇಳಿದ್ದಾರೆ. ಅವರ ಫಾರಿನ್ ಟ್ರಿಪ್‌ಗೆ 40-50 ಸಾವಿರ ಡಾಲರ್ ಖರ್ಚಾಗಿದೆ. ಮಸಾಯಿಮಾರಾ.. ತಾಂಜೇನಿಯಾ ಟ್ರಿಪ್ ಹೋಗಿದ್ರು. ಅದೆಲ್ಲ ಮಾತಾಡಿ ಆರೋಪ ಹೊರಸ್ತಿರೋದು ಯಾಕಂದ್ರೆ? ಎರಡು ವರ್ಷ ಆದ್ಮೇಲೆ ಅವರ ಮನೇಲಿ, ಅವರ ಫ್ರೆಂಡ್ ಮನೇಲಿ ಏನಾದರೂ ಆದರೆ ನನ್ನನ್ಯಾಕೆ ಎಳ್ಕೊಂಡು ಬರ್ತಿದಾರೆ ಎಂದು ಪ್ರಶ್ನಿಸಿದರು.

ಇನ್ನು ಮೂರು ಜನ ಈಕೆ ಮೇಲೆ ಅರೋಪ ಮಾಡಿದ್ದಾರೆ. ಆ ಮೂರು ಜನ ಸದ್ಯದಲ್ಲೇ ಬರ್ತಾರೆ. ಅವರಿಗೂ ಮದ್ವೆ ಮಾಡ್ಕೊತೀನಿ ರಿಲೇಷನ್‌ಶಿಪ್‌ನಲ್ಲಿ ಇರ್ತೀನಿ ಅಂತಾ ಹೇಳಿ ಮೋಸ ಮಾಡಿದ್ದಾರೆ. ನಂತರ ಸೂಸೈಡ್ ಮಾಡ್ಕೊತೀನಿ, ಟ್ಯಾಬ್ಲೆಟ್ ತಗೋತಿನಿ ಅಂತೇಳಿದ್ದಾರೆ. ರಿಕವರಿ ಸೂಟ್ ಹಾಕಿದ್ರು ಅವ್ರತ್ರ ಕೊಡೋಕೆ ಏನು ಇಲ್ಲ. ಈ ಪ್ರೊಸೆಸ್ ನಿಂತರೆ ಸಾಕು ಅನ್ಸಿದೆ. ಆ ಹುಡುಗಿ ಮುಖ ನೋಡೋಕು ಇಷ್ಟ ಇಲ್ಲ ನನಗೆ. ಅವರು ಮಾಡಿರುವ ಕೇಸ್‌ನಲ್ಲೇ ಲೀಗಲ್ ಆಗಿ ಬಗೆಹರಿಸಿಕೊಳ್ತೀನಿ. ಆ ಹುಡುಗನ ಜೊತೆ ರಿಲೇಷನ್‌ಶಿಪ್ ನಲ್ಲಿ ಇದ್ದಿದ್ದೆ, ನಾವಿಬ್ಬರು ಬೇರೆಯಾಗೋಕೆ ಕಾರಣ. ಕಾಂಪ್ರಮೈಸ್‌ಗೆ ಕೂತಾಗ ಡಿಮ್ಯಾಂಡ್ ಮಾಡಿದ್ರು. ಎಲ್ಲಾ ದಾಖಲೆಗಳು ಇವೆ.. ಪೊಲೀಸರಿಗೆ ನಾಳೆ ಕೊಡ್ತೀನಿ ಎಂದು ತಿಳಿಸಿದರು.

ನಾನು ಕಿರುಕುಳ ಕೊಡ್ತಿದ್ದೀನಿ ಅಂತ ಆರೋಪ ಮಾಡಿದ್ದಾರೆ. ಹಾಗಾಗಿ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ಎರಡು ವರ್ಷದ ಹಿಂದೆ ಸಂಬಂಧ ಮುರಿದಿದೆ. ಅವ್ರು ನನ್ನ ಮೇಲೆ ಆರೋಪ ಮಾಡಿರೋದು ಶಾಕ್ ಆಗಿದೆ. ಎರಡು ವರ್ಷದಿಂದ ಸಂಪರ್ಕದಲ್ಲೇ ಇಲ್ಲದಿರೋ ವ್ಯಕ್ತಿಗೆ ನಾನ್ಯಾಕೆ ಕಿರುಕುಳ ಕೊಡಲಿ? ಅವರು ಕೊಟ್ಟಿರುವ ದೂರಿನದ ಪ್ರಕಾರ ಆಗಸ್ಟ್ನಲ್ಲಿ ಅವರ ಮನೆ ಓನರ್ ಹಾಗೂ ಅವ್ರ ಫ್ರೆಂಡ್ ವೈಫ್‌ಗೆ ಲೆಟರ್ ಬರೆದಿದ್ದಾರಂತೆ. ನಾನು ಬರೆದಿರಬಹುದು ಅಂತಾ ಹೇಳಿ ಕಂಪ್ಲೆAಟ್ ಕೊಟ್ಟಿದ್ದಾರಂತೆ. ನಾನು ಇಂಡಿಯಾದಲ್ಲಿ ಇರಲಿಲ್ಲ. ನಾನು ಬೆಂಗಳೂರಿಗೆ ಬರುವಾಗ ಅರೆಸ್ಟ್ ಮಾಡಿದ್ದಾರೆ ಎಂದು ವಿವರಿಸಿದರು.

ಪೊಲೀಸ್ ಸ್ಟೇಷನ್‌ಗೆ ಹೋಗಿ ಡಾಕ್ಯುಮೆಂಟ್ ಕೊಡ್ಬೇಕಿತ್ತು ಇವತ್ತು. ನಾಳೆ ಬೆಳಗ್ಗೆ ಡಾಕ್ಯುಮೆಂಟ್ ಕೊಡ್ತೀನಿ. ಎಲ್ಲಾ ದಾಖಲೆಗಳು ನನ್ ಕಡೆ ಇದೆ. ಅವರಾಗವ್ರೆ ಸುಳ್ಳು ಆರೋಪ ಮಾಡಿದಾರೆ. ಇದಕ್ಕಿಂತ ಮುಂಚೆ ಕಂಪ್ಲೆಂಟ್ ಇಗ್ನೋರ್ ಮಾಡಿದ್ದೀನಿ. ನೀವಾಗಿ ನೀವು ನನ್ನ ಎಳೆದಿದ್ದೀರಾ? ನನ್ ಮೇಲೆ ಡೌಟ್ ಇದ್ರೆ ನಮ್ ಫ್ಯಾಮಿಲಿ ಮೆಂಬರ್ ಪರಿಚಯ ಇದ್ರು ಕೇಳಬಹುದಿತ್ತು. ಎಫ್‌ಐಆರ್ ಯಾಕೆ ಮಾಡಬೇಕಿತ್ತು? ಪರಿಹಾರ ಮೂಲಕ ಕಮಿಷನರ್ ಮುಂದೆ ಸೂಸೈಡ್ ಮಾಡ್ಕೊಡ್ತೀನಿ ಅಂತಾ ಹೇಳ್ತಿದ್ರು. ಅವರಾಗವರೇ ಆರೋಪ ಮಾಡಿ, ನನ್ನ ಬೀದಿಲಿ ನಿಲ್ಸಿದ್ದಾರೆ. ನಮ್ ಮಧ್ಯೆ ಏನ್ ನಡೀತು ಅಂತಾ ಹೇಳ್ತೀದ್ದೀನಿ. ಏರ್ಪೋರ್ಟ್ನಲ್ಲಿ ಎಲ್‌ಒಸಿ ಮಾಡಿದ್ದಾರೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಅವ್ರನ್ನ ಬ್ಲಾಕ್ ಮಾಡಿದ್ದೀನಿ ಎಂದು ನಿರ್ಮಾಪಕ ತಿಳಿಸಿದರು.

2017 ರಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯ. ಇರೋಕೆ ಮನೆ ಇಲ್ಲ ಅಂತ ಬರ್ತಾರೆ. ಕಬನ್ ಪಾರ್ಕ್ ಬಳಿ ಮನೆ ಅರೆಂಜ್ ಮಾಡಿದೆ. ಶ್ರೀಲಂಕಾ ಕ್ರಿಕೆಟ್ ಟೂರ್ನಮೆಂಟ್‌ಗೆ ಬರ್ತಾರೆ. ಆ ರೀತಿ ಇವರು ಪರಿಚಯ. ಸೂಸೈಡ್ ಅಂತಾರೆ. ನೂರು ಟ್ಯಾಬ್ಲೆಟ್ ತಗೊಂಡ್ರೆ ಬದುಕ್ತಾರಾ? ಹಾಸ್ಪಿಟಲ್‌ನಲ್ಲಿ ಇದ್ದಾಗ ಜಗಳ ಆಗಿಲ್ಲ. ಡಾಕ್ಟರ್ ಮೊಬೈಲ್ ಯೂಸ್ ಮಾಡ್ತಿದಾರೆ ಅಂತಾ ಹೇಳಿದ್ರು. ಅದ್ಕೆ ಮೊಬೈಲ್ ಕೊಡಿ ಅಂತಾ ಕೇಳಿದೆ ಅಷ್ಟೆ ಸ್ವಲ್ಪ. ಯಾವ ಜಗಳ ಇಲ್ಲ ಎಂದು ಅರವಿಂದ್ ರೆಡ್ಡಿ ಸ್ಪಷ್ಟಪಡಿಸಿದರು.

2023 ರ ಜೂನ್‌ನಲ್ಲಿ ಎಂಗೇಜ್ಮೆಂಟ್ ಮಾಡ್ಕೊಂಡು ಮದ್ವೆ ಆಗೋಕು ಪ್ಲ್ಯಾನ್ ಮಾಡಿಕೊಂಡಿದ್ವಿ. ಮ್ಯೂಚುಯಲ್ ಕಾಂಪ್ರಮೈಸ್ ಮಾಡೋಕೆ ಒಪ್ಪಿಲ್ಲ. ಅವ್ರು ಕೆಲವು ಡಿಮ್ಯಾಂಡ್ ಮಾಡಿದ್ದಾರೆ. ಯಾರಾದರೂ ಫೋಟೋ ತೆಗೆದು ಕಳಿಸಿದ್ರೆ, ನನ್ನನ್ನ ಹೊಣೆ ಯಾಕೆ ಮಾಡ್ತಾರೆ? 2 ರಿಂದ 2.5 ಕೋಟಿ ಹಣ ಖರ್ಚಾಗಿದೆ. ಕಾರ್ ಎಲ್ಲಾ ಸೇರಿದ್ರೆ 3.5 ಕೋಟಿ ಖರ್ಚಾಗಿದೆ. ಈ ಪ್ರಕರಣ ಹೊರ ಬಿದ್ಮೇಲೆ, ಮೂರು ಜನ ಫೋನ್ ಮಾಡಿ ಕಾಂಟ್ಯಾಕ್ಟ್ ಮಾಡ್ತಿದ್ದಾರೆ. ಅವರ ಹತ್ತಿರನೂ ಹಣ ಇಸ್ಕೊಂಡಿದ್ದಾರAತೆ. ಅವರಿಗೂ ಇದೇ ರೀತಿ ಮೋಸ ಆಗಿದೆ. ಅವರಿಗೆ ಸೂಸೈಡ್ ಬೆದರಿಕೆ ಮಾಡಿದ್ದಾರೆ ಎಂದು ತಿಳಿಸಿದರು.

Share This Article