ಬೆಂಗಳೂರಿನ ಬಹುತೇಕ ಕಡೆ ಗಾಳಿಯ ಗುಟ್ಟಮಟ್ಟ ಕುಸಿತ – ಎಲ್ಲೆಲ್ಲಿ ಹೇಗಿದೆ?

Public TV
1 Min Read

ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರಿನ (Bengaluru) ಬಹುತೇಕ ಕಡೆ ಗಾಳಿಯ ಗುಣಮಟ್ಟದಲ್ಲಿ (Air Quality) ಇಳಿಕೆಯಾಗಿದ್ದು, ವಾಯುಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಬೆಂಗಳೂರಿಗರಿಗೆ ಎಚ್ಚರಿಕೆ ಕರೆಗಂಟೆ ಬಾರಿಸುತ್ತಿದ್ದು, ಶುದ್ಧಗಾಳಿಯ ಗುಟ್ಟಮಟ್ಟ ಸೂಚ್ಯಂಕ ಕುಸಿತವಾಗುತ್ತಿದೆ. ಇದರಿಂದ ಗಾಳಿ ವಿಷವಾಗಿ ಪರಿಣಮಿಸುತ್ತಿದ್ದು, ಬೆರಳೆಣಿಕೆಯಷ್ಟು ಏರಿಯಾದಲ್ಲಿ ಮಾತ್ರ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಹೀಗಾಗಿ ಜನರು ಉಸಿರಾಟದ ತೊಂದರೆಯಿಂದ ಬಳಲುವ ಸಾಧ್ಯತೆಯಿರುತ್ತದೆ.ಇದನ್ನೂ ಓದಿ:ಬಾಂಗ್ಲಾ ಮಾಜಿ ಪ್ರಧಾನಿ ಶೇಖ್‌ ಹಸೀನಾ ದೋಷಿ

ಇನ್ನೂ ಏರ್ ಕ್ವಾಲಿಟಿ ಇಂಡೆಕ್ಸ್‌ನಲ್ಲಿ ಡೇಂಜರಸ್ ವಾಯುಮಾಲಿನ್ಯದ ಪ್ರಮಾಣ ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 0 ದಿಂದ 50ರವರೆಗೆ ಏರ್ ಕ್ವಾಲಿಟಿ ಇಂಡೆಕ್ಸ್ ಬಂದರೆ ಅದನ್ನು ಉತ್ತಮ ವಾತಾವರಣ ಎಂದು ಪರಿಗಣಿಸಲಾಗುತ್ತಿದೆ.

ಬೆಂಗಳೂರಿನ ಯಾವ ಏರಿಯಾಗಳಲ್ಲಿ ಗುಣಮಟ್ಟ ಹೇಗಿದೆ?
ಹೆಬ್ಬಾಳ – 112
ಜಯನಗರ -121
ನಿಮ್ಹಾನ್ಸ್ – 106
ಸೆಂಟ್ರಲ್ ಸಿಲ್ಕ್ ಬೋರ್ಡ್ – 137
ಸಿಟಿ ರೈಲ್ವೇ ಸ್ಟೇಷನ್ – 106
ಬಸವೇಶ್ವರ ನಗರ – 55
ಜಿಗಣಿ – 87
ಕಸ್ತೂರಿನಗರ – 70
ಪೀಣ್ಯ – 101
ಮೈಲಸಂದ್ರ – 106

Share This Article