ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

Public TV
1 Min Read

ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಭಾರತದ ಜನತೆಯ ಕ್ಷಮೆಯಾಚಿಸಿ ಎಂದು ಮಾಲ್ಡೀವ್ಸ್‌ (Maldives) ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು (Mohamed Muizzu) ಅವರಿಗೆ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಒತ್ತಾಯಿಸಿದ್ದಾರೆ.

ಮಾಲ್ಡೀವಿಯನ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ದೇಶದ ಪ್ರಮುಖ ಪ್ರತಿಪಕ್ಷ MDP. ಈ ಪಕ್ಷ ದೇಶದ ಅಧ್ಯಕ್ಷರ ವಿರುದ್ಧ ದೋಷಾರೋಪಣೆಯ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದು ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಸದನದಲ್ಲಿ ಘರ್ಷಣೆ ಉಂಟುಮಾಡಿದ ನಂತರದ ಬೆಳವಣಿಗೆಯಾಗಿದೆ. ಇದನ್ನೂ ಓದಿ: ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಎಫೆಕ್ಟ್‌ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

ಯಾವುದೇ ದೇಶವಾಗಲಿ ಅಥವಾ ನಮ್ಮ ನೆರೆಹೊರೆಯ ದೇಶದ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಾತನಾಡಬಾರದು. ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ. ಅದನ್ನು ಪರಿಗಣಿಸಬೇಕು ಎಂದು ಖಾಸಿಮ್‌ ತಿಳಿಸಿದ್ದಾರೆ.

ಡಿಕ್ರಿಯನ್ನು ರದ್ದುಗೊಳಿಸಬಾರದು. ಏಕೆಂದರೆ ಅದು ರಾಷ್ಟ್ರಕ್ಕೆ ನಷ್ಟವನ್ನು ಉಂಟುಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡಬಾರದು ಎಂದು ನಾನು ಮುಯಿಜ್ಜುಗೆ ಹೇಳುತ್ತೇನೆ. ಚೀನಾ ಪ್ರವಾಸದ ನಂತರ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಕುರಿತು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಈ ಎಲ್ಲಾ ವಿಚಾರವಾಗಿ ಔಪಚಾರಿಕವಾಗಿ ಕ್ಷಮೆಯಾಚಿಸಲು ನಾನು ಅಧ್ಯಕ್ಷ ಮುಯಿಜ್ಜು ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಈ ವಿಚಾರವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಅಂಶವನ್ನು ಮುಂದಿಟ್ಟುಕೊಂಡು ಮಾಲ್ಡೀವ್ಸ್‌ ಸಚಿವರು, ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಭಾರತೀಯ ಪ್ರವಾಸಿಗರು ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ನಡೆಸಿದರು. ಇದರಿಂದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ.

Share This Article