ಅನರ್ಹ ಪಡಿತರ ಚೀಟಿ – ರಿಯಾಲಿಟಿ ಚೆಕ್‌ಗೆ ಮುಂದಾದ ಆಹಾರ ಇಲಾಖೆ

1 Min Read

ಬೆಂಗಳೂರು: ಆಹಾರ ಇಲಾಖೆ (Food Department) ಬಿಪಿಎಲ್ (BPL Card), ಎಪಿಎಲ್ ಕಾರ್ಡ್‌ಗಳ (APL Card) ರಿಯಾಲಿಟಿ ಚೆಕ್‌ಗೆ ಮುಂದಾಗಿದೆ. ಈ ಮೂಲಕ ಅನರ್ಹ ಪಡಿತರ ಚೀಟಿಗಳ ಪರಿಶೀಲನೆಗೆ ಮುಂದಾಗಿದೆ. ಮನೆ ಮನೆಗೆ ಭೇಟಿ ಕೊಟ್ಟು ಅನರ್ಹರ ಕಾರ್ಡ್‌ಗಳನ್ನು ರದ್ದು ಮಾಡಿ, ಅರ್ಹತೆ ಇರುವವರಿಗೆ ಕಾರ್ಡ್ ಕೊಡಲು ಇಲಾಖೆ ಮುಂದಾಗಿದೆ.

ಸುಮಾರು 13 ಲಕ್ಷಕ್ಕೂ ಹೆಚ್ಚು ಕಾರ್ಡ್‌ನ್ನು ಪರಿಷ್ಕರಣೆ ಮಾಡಲಾಗ್ತಿದೆ. ಆಹಾರ ಇಲಾಖೆ ಆದ್ಯತಾ ಪಡಿತರ ಚೀಟಿಗಳನ್ನ ಅರ್ಹರಿಲ್ಲದಿದ್ದರೂ ಇಟ್ಟಿಕೊಂಡಿರುವ ಕಾರ್ಡ್‌ ಪರಿಶೀಲನೆ ಮಾಡಿ ಅರ್ಹತೆ ಇರುವವರಿಗೆ ತಲುಪಿಸಲು ಈಗ ಮುಂದಾಗಿದೆ. ಹೀಗಾಗಿ ಮನೆ ಮನೆಗೆ ಭೇಟಿ ಕೊಟ್ಟು ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಕಾರ್ಡ್‌ದಾರರ ದಾಖಲಾತಿ ಪರಿಶೀಲಿಸಿ ಅರ್ಹತೆ ಇರುವವರಿಗೆ ಕಾರ್ಡ್ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕೋಳಿ ಮೊಟ್ಟೆ ಸೇವಿಸಿದ್ರೆ ಕ್ಯಾನ್ಸರ್ ಬರುತ್ತಾ? ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌

ಈಗಾಗಲೇ ಆಯಾಯ ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಪರಿಷ್ಕರಣೆ ಮಾಡ್ತಿರುವ ಕಾರ್ಡ್ ಪಟ್ಟಿ ಕಳುಹಿಸಿದೆ. ತೆರಿಗೆ ಪಾವತಿ, ಜಮೀನು, ಸ್ವಂತ ಮನೆ ಮತ್ತು ಕಾರುಗಳನ್ನ ಹೊಂದಿರುವವರ ಕಾರ್ಡ್ ಗಳನ್ನ ಡಿಲಿಟ್ ಮಾಡಿದೆ. ಡಿಲಿಟ್ ಆಗಿರುವ ಕಾರ್ಡ್‌ದಾರರಿಂದ ನ್ಯಾಯ ಬೆಲೆ ಅಂಗಡಿಯವರು ದಾಖಲಾತಿ ಸಂಗ್ರಹ ಮಾಡಿಕೊಂಡಿದ್ದಾರೆ. ಕಾರ್ಡ್‌ದಾರರು ಕೂಡ ನಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ಮತ್ತು ಆದಾಯ ದೃಢಿಕರಣ ಪತ್ರವನ್ನ ಕಡ್ಡಾಯವಾಗಿ ಪರಿಶೀಲನೆ ವೇಳೆ ತೋರಿಸಬೇಕಿದೆ.

ಪರಿಶೀಲನೆ ವೇಳೆ ಆದಾಯ ಹೆಚ್ವಿರೋದು ಪತ್ತೆಯಾದ್ರೆ ಕಾರ್ಡ್ ಎಪಿಎಲ್ ಗೆ ಬದಲಾಯಿಸಲಾಗುತ್ತದೆ. ಆದಾಯ ಇಲ್ಲದೇ ಕಾರ್ಡ್ ಪಡೆಯಲು ಅರ್ಹರಿದ್ದರೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆಹಾರ ಇಲಾಖೆಯ ಕ್ರಮದಿಂದ ಅನರ್ಹ ಪಡಿತರ ಚೀಟಿಗಳಿಗೆ ಬ್ರೇಕ್‌ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮುಡಾ ಕೇಸ್‌ – ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್‌ ಡೇ

Share This Article