ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ

Public TV
1 Min Read

ಹೈದರಾಬಾದ್: ಬಾಹುಬಲಿ ಬೆಡಗಿ, ಸ್ವೀಟಿ ಅನುಷ್ಕಾ ಶೆಟ್ಟಿ ಅವರು ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. 2005ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ ಈಗಲೂ ಬಹುಬೇಡಿಕೆಯ ನಟಿಯಾಗಿ ತಮ್ಮ ಸಿನಿ ಪಯಣ ಮುಂದುವರಿಸುತ್ತಿದ್ದಾರೆ.

ಇತ್ತೀಚೆಗೆ ಅನುಷ್ಕಾ ಅವರು ಸಿನಿಮಾ ರಂಗದಲ್ಲಿ 15 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲು ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಸ್ ರಾಜಮೌಳಿ, ಪುರಿ ಜಗನ್ನಾಥ್, ಸುರೇಶ್ ಬಾಬು, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿ, ಅನುಷ್ಕಾಗೆ ಶುಭಕೋರಿದ್ದರು. ಈ ವೇಳೆ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಇಷ್ಟು ವರ್ಷಗಳಿಂದ ತಮ್ಮ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

ನನ್ನ 15 ವರ್ಷಗಳ ಈ ಕಠಿಣ ಶ್ರಮ ಉದ್ಯಮದ ಉಳಿದ ಕಲಾವಿದರಿಗೆ ಹೋಲಿಸಿದರೆ ಏನು ಅಲ್ಲ ಎಂಬುದು ನನ್ನ ಭಾವನೆ. ನಾನು ಅಭಿನಯಿಸಿರುವ ಪ್ರತಿಯೊಂದು ಸಿನಿಮಾವೂ, ನಿಶಬ್ದಂವರೆಗೂ ಸಿನಿಮಾವರೆಗೂ ನಾನು ಅನುಭವಿಸಿದ ಎಲ್ಲಾ ಪಾತ್ರ ಅನುಭವಗಳು ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಅನುಷ್ಕಾ ಖುಷಿಯನ್ನು ಹಂಚಿಕೊಂಡಿದ್ದಾರೆ.

https://www.instagram.com/p/B9tXfJAnkFx/

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ “15 ವರ್ಷದ ನನ್ನ ಸಿನಿ ಪಯಣವನ್ನು ಸಂಭ್ರಮ #TeamASF (ಅನುಷ್ಕಾ ಶೆಟ್ಟಿ ಅಭಿಮಾನಿ ಬಳಗ) ಜೊತೆ ಆಚರಣೆ, ನೀವು ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡು, ಅಭಿಮಾನಿಗಳ ಜೊತೆ ತಾವು ಇರುವ ಫೋಟೋವನ್ನು ಅನುಷ್ಕಾ ಪೋಸ್ಟ್ ಮಾಡಿದ್ದಾರೆ.

ಸದ್ಯ ಅನುಷ್ಕಾ ಶೆಟ್ಟಿ ‘ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *