ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

Public TV
1 Min Read

ಮುಂಬೈ: ಝೀರೋ ಸಿನಿಮಾ ಬಳಿಕ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಮದುವೆ ಬಳಿಕ ಅನುಷ್ಕಾ ಶರ್ಮಾ ನಟನೆಯ ಸಿನಿಮಾಗಳು ಒಂದರ ನಂತರ ಒಂದರಂತೆ ಬಿಡುಗಡೆಗೊಂಡವು. 2018 ಡಿಸೆಂಬರ್ ನಲ್ಲಿ ತೆರೆಕಂಡ ಝೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ದೂರ ಉಳಿದುಕೊಂಡು ಖಾಸಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ಬಣ್ಣದ ಲೋಕದಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಬಲವಾಗಿ ಕೇಳಿ ಬಂದಿದ್ದವು.

ಸಿನ್ಮಾದಿಂದ ದೂರ ಉಳಿಯುವ ಸುದ್ದಿಗೆ ಸಾಕ್ಷಿ ಎಂಬಂತೆ ಅನುಷ್ಕಾ ಹೇಳಿಕೆಯೊಂದು ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಖಾಸಗಿ ಸಂದರ್ಶನದಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ನನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದೇನೆ. ಡಿಜಿಟಲ್ ವೇದಿಕೆಯಲ್ಲಿ ಏನಾದ್ರೂ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಅನುಷ್ಕಾ ಶರ್ಮಾ ಹೇಳಿದ್ದರು. ಅನುಷ್ಕಾ ಹೇಳಿಕೆ ಬೆನ್ನಲ್ಲೇ ಸಿನಿಮಾದಿಂದ ದೂರವಾಗುತ್ತಿದ್ದಾರೆ ಎಂಬ ಅಭಿಮಾನಿಗಳ ಊಹೆ ಬಲವಾಗಿತ್ತು. ಇದೀಗ ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ಜಂಟಿ ನಿರ್ಮಾಣದ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಹೃತಿಕ್ ರೋಷನ್ ನಟನೆ ಸಿನಿಮಾ ‘ವಾರ್’ ಸತತವಾಗಿ ಬಾಕ್ಸ್ ಆಫೀಸ್ ದೋಚುತ್ತಿದೆ. ಸಿನಿಮಾದಲ್ಲಿ ಹೃತಿಕ್ ಗೆ ಶಿಷ್ಯನಾಗಿ ಟೈಗರ್ ಶ್ರಾಫ್ ನಟಿಸಿದ್ದಾರೆ. ಸಿನಿಮಾದಲ್ಲಿ ಗುರು-ಶಿಷ್ಯನ ನಡುವೆ ಸಾಹಸಮಯ ದೃಶ್ಯಗಳು ನೋಡುಗರನ್ನು ಕುರ್ಚಿಯ ತುತ್ತ ತುದಿಗೆ ತಂದು ಕೂರಿಸುತ್ತದೆ. ಇಷ್ಟು ಮಾತ್ರವಲ್ಲದೇ ಹೃತಿಕ್ ಮತ್ತು ಟೈಗರ್ ಸಿಕ್ಸ್ ಪ್ಯಾಕ್ ಹುಡುಗಿಯರು ಫಿದಾ ಆಗಿ ತಮ್ಮ ನೆಚ್ಚಿನ ನಟನಿಗೆ ಸಾಲು ಸಾಲು ಬೇಡಿಕೆಗಳನ್ನು ಇಡುತ್ತಿದ್ದಾರೆ.

ಅನುಷ್ಕಾ ಮತ್ತು ಹೃತಿಕ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಚಿತ್ರೀಕರಣ 2020ರಿಂದ ಆರಂಭಗೊಳ್ಳಲಿದ್ದು, 2021ಕ್ಕೆ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೊದಲು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *