ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಅನುಷ್ಕಾ ಸವಾರಿ: ಪೊಲೀಸರು ದಂಡ ಹಾಕಿದ್ದೆಷ್ಟು?

Public TV
1 Min Read

ಮೊನ್ನೆಯಷ್ಟೇ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಲ್ಮೆಟ್ ಇಲ್ಲದೇ ದ್ವಿಚಕ್ರ (Bike) ವಾಹನದಲ್ಲಿ ಸವಾರಿ ಮಾಡಿದರು ಎನ್ನುವ ಕಾರಣಕ್ಕಾಗಿ ಸಖತ್ ಟ್ರೋಲ್ ಆಗಿದ್ದರು. ಅಲ್ಲದೇ, ಕೆಲವರು ಮುಂಬೈ ಪೊಲೀಸರಿಗೆ ಆ ಫೋಟೋ ಟ್ಯಾಗ್ ಮಾಡಿ, ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇಂಥದ್ದೇ ಕಾರಣಕ್ಕಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಕೂಡ ಟ್ರೋಲ್ ಆಗಿದ್ದರು. ಅನುಷ್ಕಾಗೂ ದಂಡ (Penalty) ಹಾಕಿ ಎಂದು ಹಲವರು ಹೇಳಿದ್ದರು.

ಹೆಲ್ಮೆಟ್ ಹಾಕದೇ ಪ್ರಯಾಣ ಮಾಡಿದ್ದಕ್ಕಾಗಿ ಅಮಿತಾಭ್ ಮತ್ತು ಅನುಷ್ಕಾ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿದ್ದಂತೆಯೇ ಅಮಿತಾಭ್ ಜಾಣತನ ಮೆರೆದುಬಿಟ್ಟರು. ನಾನು ಸವಾರಿ ಮಾಡಿಲ್ಲ. ಅದು ಶೂಟಿಂಗ್ ಸ್ಥಳದಲ್ಲಿ ಆಗಿರುವಂಥದ್ದು. ನಲವತ್ತು ಮೀಟರ್ ಕೂಡ ವಾಹನ ಚಲಿಸಿಲ್ಲ ಎಂದು ಹೇಳುವ ಮೂಲಕ ಸಮಜಾಯಿಸಿ ನೀಡಿದ್ದರು. ಬೈಕ್ ಏರುವಂತಹ ಸಂದರ್ಭ ಬಂದರೆ ಹೆಲ್ಮೆಟ್ ಹಾಕುತ್ತೇನೆ ಎಂದೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

ಆದರೆ, ಅನುಷ್ಕಾ ಶರ್ಮಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಬೈಕ್ ಓಡಿಸಿದ್ದ ಅವರ ಬಾಡಿ ಗಾರ್ಡ್ (Bodygard) ಮೇಲೆ ಕ್ರಮ ತಗೆದುಕೊಳ್ಳಲಾಗಿದೆ. ಅನುಷ್ಕಾ ಅವರ ಬಾಡಿ ಗಾರ್ಡ್ ಅವತ್ತು ಬೈಕ್ ಓಡಿಸಿದ್ದರಿಂದ ಅವರಿಗೆ 10500 ರೂಪಾಯಿ ದಂಡವನ್ನು ಹಾಕಲಾಗಿದೆ. ಇಬ್ಬರಿಗೂ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Share This Article