ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

Public TV
1 Min Read

ಲಕ್ನೋ: ಸಮಾಜವಾದಿ ಪಕ್ಷವು ಉತ್ತರಪ್ರದೇಶವನ್ನು ಆಳುವಾಗ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ಆಗ್ರಾದಲ್ಲಿ ನಡೆದ ಎಂಪಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು 2017 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು, ಸಮಾಜವಾದಿ ಪಕ್ಷ ಉತ್ತರಪ್ರದೇಶವನ್ನು ಆಳುತ್ತಿತ್ತು. ಆದರೆ ಆ ಸಂದರ್ಭದಲ್ಲಿ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಆರೋಪಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಿವೆ. ದೇಶದಲ್ಲಿ ಅಥವಾ ದೇಶದ ಹೊರಗೆ ಯಾರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಅವರನ್ನ ಯಾವುದೇ ಕಾರಣಕ್ಕೂ ಉಳಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

ಕ್ರೀಡಾ ಕೂಟವನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ಈ ಕ್ರೀಡಾ ಕೂಟವು ಪ್ರತಿ ವರ್ಷ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ನಡೆಸುತ್ತೇವೆ. ಇಂತಹ ಕ್ರೀಡಾ ಸ್ಪರ್ಧೆಗಳು ನಮ್ಮ ದೇಶದ ಆಟಗಾರಿಗೆ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಆಗುತ್ತದೆ ಎಂದರು.

ನಗರದ ಬಹುಬೇಡಿಕೆಯಾಗಿರುವ ಹೊಸ ಅಂತರಾಷ್ಟ್ರೀಯ ಕ್ರೀಡಾಂಗಣ ಆಗ್ರಾದಲ್ಲಿ ನಿರ್ಮಿಸುತ್ತೇವೆ. ಈ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಕ್ರೀಡಾಕೂಟಗಳನ್ನು ಆಯೋಜಿಸುತ್ತೇವೆ. ಈ ಹಿಂದೆ ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಾಘೆಲ್, ಲೋಕಸಭೆ ಸಂಸದ ರಾಜ್‍ಕುಮಾರ್ ಚಹಾರ್, ಅವರು ಈ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿದ್ದರು. ಆದರೆ ಹಿಂದಿನ ಸರ್ಕಾರವು ಈ ಕ್ರೀಡಾಂಗಣದ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ನಮ್ಮ ಸರ್ಕಾರವು ಜನಪರವಾದ ಸರ್ಕಾರವಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *