ಅನುಪಮಾ ನಟನೆಯ ‘ಪರದಾ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

Public TV
1 Min Read

ಟಿಲ್ಲು ಸ್ಕ್ವೇರ್ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ಅನುಪಮಾ ಪರಮೇಶ್ವರನ್ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಚಿತ್ರಕ್ಕೆ ಪರದಾ (Paradha) ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ (First Look) ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ಹಿಂದೆ ಬಂಡಿ ಸಿನಿಮಾ ಮಾಡಿದ್ದ ಪ್ರವೀಣ್ ಕಂಡ್ರೇಗುಲಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ದರ್ಶನಾ ರಾಜೇಂದ್ರನ್ ಮತ್ತು ಸಂಗೀತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೀಧರ್ ಮುಕ್ಕುವ, ವಿಜಯ್ ಡೊಂಕದ ಹಾಗೂ ಶ್ರೀನಿವಾಸಲು ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಅನುಪಮಾ ಪರಮೇಶ್ವರನ್ ಸದ್ಯ ಪಡ್ಡೆಹುಡುಗರ ಕ್ರಶ್ ಆಗಿದ್ದಾರೆ. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾ ಸಕ್ಸಸ್ ಆದ್ಮೇಲೆ ಅನುಪಮಾ (Anupama Parameshwaran) ದುಬಾರಿ ನಟಿಯಾಗಿದ್ದಾರೆ. ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ. ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಎಂದಿದ್ದ ಅನುಪಮಾ ಇದೀಗ ಬದಲಾಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಅಭಿಮಾನಿಗಳ ಉತ್ತರ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ್ಮೇಲೆ ಅನುಪಮಾಗೆ ಸಹಜವಾಗಿ ಬೇಡಿಕೆ ಜಾಸ್ತಿ ಆಗಿದೆ.

ಕಳೆದ ವರ್ಷ ‘ಕಾರ್ತಿಕೇಯ 2’ ಸಿನಿಮಾ ಆದ್ಮೇಲೆ ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಕೂಡ ಬ್ರೇಕ್ ಸಿಕ್ಕಿದೆ. 40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಒಂದೂವರೆ ಕೋಟಿ ರೂ.ವರೆಗೂ ಚಾರ್ಜ್ ಮಾಡುತ್ತಿದ್ದಾರಂತೆ.

 

ಇದೀಗ ಬರುತ್ತಿರುವ ಸಿನಿಮಾ ಆಫರ್‌ಗಳಿಗೆ ದುಬಾರಿ ಸಂಭಾವನೆಗೆ ನಟಿ ಬೇಡಿಕೆ ಇಡುತ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸು ಗುಸು ಶುರುವಾಗಿದೆ. ಈ ಮೂಲಕ ರಶ್ಮಿಕಾ, ಶ್ರೀಲೀಲಾ, ಪೂಜಾ ಹೆಗ್ಡೆ ಸಾಲಿಗೆ ಸೇರುವ ಮೂಲಕ ದುಬಾರಿ ನಟಿ ಎನಿಸಿಕೊಂಡಿದ್ದಾರೆ.

Share This Article