ಜ್ಯೂ.ಎನ್‌ಟಿಆರ್ ಎದುರೇ ಅಭಿಮಾನಿಗಳಿಂದ ಅನುಪಮಾ ಪರಮೇಶ್ವರನ್‌ಗೆ ಅವಮಾನ

Public TV
2 Min Read

ಸೌತ್ ಬ್ಯೂಟಿ ಅನುಪಮಾ ಪರಮೇಶ್ವರನ್ ಸದ್ಯ ‘ಟಿಲ್ಲು ಸ್ಕ್ವೇರ್’ (Tillu Square) ಸಕ್ಸಸ್ ಆಗಿರುವ ಖುಷಿಯಲ್ಲಿದ್ದಾರೆ. ಸಿದ್ದು ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ ಮೇಲೆ ಅನುಪಮಾಗೆ ಪಡ್ಡೆಹುಡುಗರ ಅಭಿಮಾನಿಗಳ ಬಳಗ ಜಾಸ್ತಿ ಆಗಿದೆ. ಹೀಗಿರುವಾಗ ‘ಟಿಲ್ಲು ಸ್ಕ್ವೇರ್’ ‌ಸಕ್ಸಸ್ ಮೀಟ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಜ್ಯೂ.ಎನ್‌ಟಿಆರ್ (Jr.ntr) ಎದುರೇ ಅನುಪಮಾಗೆ ಅಭಿಮಾನಿಗಳಿಂದ ಅವಮಾನ ಆಗಿದೆ.

‘ಟಿಲ್ಲು ಸ್ಕ್ವೇರ್’ ಜ್ಯೂ.ಎನ್‌ಟಿಆರ್ ಭಾಗಿಯಾಗಿದ್ದರಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಜ್ಯೂ.ಎನ್‌ಟಿಆರ್ ವೇದಿಕೆಗೆ ಬರಬೇಕೆಂದು ಒತ್ತಾಯಿಸುತ್ತಲೇ ಇದ್ದರು. ಚಿತ್ರದ ನಾಯಕಿ ಅನುಪಮಾ (Anupama Parameshwaran) ಈ ವೇಳೆ ಭಾಷಣ ಮಾಡಲು ವೇದಿಕೆಯನ್ನು ಏರಿದಾಗ ಅವರಿಗೆ ಮಾತನಾಡಲು ಜ್ಯೂ.ಎನ್‌ಟಿಆರ್ ಫ್ಯಾನ್ಸ್ ಬಿಡಲೇ ಇಲ್ಲ. ನಟಿ ಭಾಷಣ ಆರಂಭಿಸುವ ಮೊದಲೇ ನಿಮ್ಮ ಭಾಷಣ ಬೇಕಿಲ್ಲ ಎಂದು ಖ್ಯಾತೆ ತೆಗೆದಿದ್ದಾರೆ. ಇದನ್ನೂ ಓದಿ:ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

ನಟಿ ಕೂಡ ವೇದಿಕೆಯಲ್ಲಿ, ನಾನು ಮಾತನಾಡಬೇಕೇ ಅಥವಾ ಬೇಡವೇ? ಎಂದು ಪ್ರಶ್ನೆ ಇಟ್ಟಾಗ ನೆರೆದಿದ್ದ ಅಭಿಮಾನಿಗಳು ಬೇಡ ಎಂದು ಕೂಗಲು ಆರಂಭಿಸಿದ್ದಾರೆ. ಜೊತೆಗೆ ಜ್ಯೂ. ಎನ್‌ಟಿಆರ್ ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದಾದ ಬಳಿಕ ಅನುಪಮಾ ಅವರು ವೇದಿಕೆಯಲ್ಲಿ ಹೀಗೆ ಅಂದರು. ಸರಿ ನಾನು ಮಾತನಾಡುವುದಿಲ್ಲ. ಕೇವಲ ಒಂದು ನಿಮಿಷ ತೆಗೆದುಕೊಳ್ಳುತ್ತೇನೆ ಎಂದರು.

ನಾನು ಕೇವಲ ಒಂದೇ ಒಂದು ನಿಮಿಷ ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಾನು ನಿಮ್ಮ ಸಮಯವನ್ನು ಹಾಳು ಮಾಡುವುದಿಲ್ಲ. ಎನ್‌ಟಿಆರ್ ಅವರೇ ನೀವು ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದಗಳು. ನನಗೆ ಏನೂ ಬೇಜಾರಾಗಿಲ್ಲ. ಯಾಕೆಂದರೆ, ಅವರ ಭಾವನೆಗಳೇನು ಎನ್ನುವುದು ನಾನು ಅರ್ಥೈಸಿಕೊಳ್ಳಬಲ್ಲೆ ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ನಟಿಗೆ ಇಂತಹ ಸಂದರ್ಭವನ್ನು ಹ್ಯಾಂಡಲ್ ಮಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಾವಿದರು ಯಾರೇ ಆಗಿರಲಿ ಪ್ರತಿಯೊಬ್ಬರಿಗೂ ಗೌರವ ಕೊಡಬೇಕು. ಅನುಪಮಾ ವೇದಿಕೆಗೆ ಬಂದಾಗ ಅಭಿಮಾನಿಗಳು ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳಿಗೂ ಜ್ಯೂ.ಎನ್‌ಟಿಆರ್(Jr.Ntr) ತಿಳಿ ಹೇಳಬೇಕು ಎಂದು ಸಲಹೆ ನೀಡಿದ್ದಾರೆ.

Share This Article