ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

Public TV
1 Min Read

– ಎನ್‌ಐಎಯಿಂದ 13 ಜನರ ಬಂಧನ

ನವದೆಹಲಿ: ಐಸಿಸ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣದಲ್ಲಿ ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕ (Karnataka), ಮಹಾರಾಷ್ಟ್ರದ (Maharashtra) ಹಲವು ಸ್ಥಳಗಳಲ್ಲಿ ಎನ್‌ಐಎ (NIA) ಭಯೋತ್ಪಾದನಾ ವಿರೋಧಿ ದಾಳಿ ನಡೆಸಿದೆ.

ಶನಿವಾರ ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನ ಪ್ರೇಜರ್ ಟೌನ್‌ನ ಮೋರ್ ರಸ್ತೆಯಲ್ಲಿ ದಾಳಿ ನಡೆಸಿ ಎನ್‌ಐಎ ಪರಿಶೀಲನೆ ಕೈಗೊಂಡಿದೆ. ಐಸಿಸ್‌ (ISIS) ಉಗ್ರರ ಜೊತೆ ಸಂಪರ್ಕದಲ್ಲಿರುವ ಹಾಗೂ ವಾಸವಾಗಿರುವ ಶಂಕೆ ಹಿನ್ನೆಲೆ ಈ ದಾಳಿ ನಡೆದಿದೆ. ಇದನ್ನೂ ಓದಿ: ಠಾಣೆಯಲ್ಲಿ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದಾಗ ಮಹಿಳೆಗೆ ಗುಂಡೇಟು – ಸ್ಥಿತಿ ಗಂಭೀರ

ಮಹಾರಾಷ್ಟ್ರದಲ್ಲಿ ಥಾಣೆ, ಪುಣೆ, ಮೀರಾ ಭಯಂದರ್ ಸೇರಿದಂತೆ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಕಡೆ ಶೋಧ ನಡೆದಿದೆ. ಪುಣೆಯಲ್ಲಿ ಎರಡು ಮತ್ತು ಮೀರಾ ಭಯಂದರ್‌ನಲ್ಲಿ ಒಂದು ಕಡೆ ದಾಳಿ ನಡೆದಿದೆ.

ದಾಳಿ ವೇಳೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾಗತಿಕ ನಾಯಕರ ಪಟ್ಟಿ ರಿಲೀಸ್‌ – ಮೋದಿಯೇ ನಂಬರ್‌ 1

Share This Article