ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ (Janardhana Reddy) ಮನೆ ಮುಂದೆ ಗಲಭೆ ವೇಳೆ ನಡೆದ ಶೂಟೌಟ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪ್ರಕರಣ ಸಂಬಂಧ 3 ದಿನದಲ್ಲಿ ಕಂಪ್ಲೀಟ್ ರಿಪೋರ್ಟ್ ನೀಡಲು ಎಸ್‌ಪಿ ಸುಮನ್ ಡಿ ಪನ್ನೇಕರ್ ಅವರಿಗೆ ನೂತನ ಐಜಿಪಿ ಹರ್ಷ ಗುಪ್ತಾ ಸೂಚನೆ ನೀಡಿದ್ದಾರೆ.
ರೆಡ್ಡಿ ಮನೆಯ ಮುಂದಿನ ವಿಡಿಯೋವನ್ನ ಇಂಚಿಂಚೂ ಪೊಲೀಸರು (Ballari Police) ಪರಿಶೀಲಿಸುತ್ತಿದ್ದು, ಗಲಾಟೆ ವಿಡಿಯೋಗಳಲ್ಲಿ ಕಾಣಿಸಿಕೊಂಡ ಅರ್ಧಕ್ಕರ್ಧ ಮಂದಿ ಬಳ್ಳಾರಿಯವ್ರೇ ಅಲ್ಲ, ಆಂಧ್ರ ಮತ್ತು ತೆಲಂಗಾಣದಿಂದ ಬಂದಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಇದನ್ನೂ ಓದಿ: ಬಳ್ಳಾರಿ ಗಲಭೆ ಕೇಸ್; ಪ್ರಕರಣ ಸಿಐಡಿಗೆ ವಹಿಸಿ ಸರ್ಕಾರ ಆದೇಶ
15 ದಿನಗಳ ಟವರ್ ಲೊಕೇಷನ್ ಟ್ರ್ಯಾಕ್
ವಿಡಿಯೋಗಳನ್ನ ತೋರಿಸಿ ಸ್ಥಳೀಯರ ಬಳಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ವಿಡಿಯೋದಲ್ಲಿ ಇರೋರು ಯಾರಂತ ಗೊತ್ತಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರಂತೆ. ಈ ಹಿನ್ನೆಲೆ ಒಂದು ಸ್ಪೆಷಲ್ ಟೀಂ ಆಂಧ್ರ ಹಾಗೂ ತೆಲಂಗಾಣದಲ್ಲೂ ಕಾರ್ಯಾಚರಣೆಗೆ ಇಳಿದಿದೆ. ಪೊಲೀಸರು 15 ದಿನಗಳ ಟವರ್ ಲೊಕೇಷನ್ ಟ್ರ‍್ಯಾಕ್ ಮಾಡಿದ್ದಾರೆ.
ಇದರೊಂದಿಗೆ ಗಲಾಟೆಯಲ್ಲಿ ಬಳಕೆಯಾದ ದೊಣ್ಣೆಗಳ ರಾಶಿ, ಗನ್ ಬಳಕೆ ರೀತಿ, ಕಲ್ಲು, ಖಾರದ ಪುಡಿ ಬಳಕೆ ಎಲ್ಲವೂ ಒಂದೇ ಮಾದರಿಯಲ್ಲಿದ್ದು ಇವೆಲ್ಲವನ್ನೂ ದಿಢೀರ್ ಅಂತ ಸಂಗ್ರಹ ಮಾಡಿದ್ರಾ? ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುದರ ಟೆಕ್ನಿಕಲ್ ಅನಾಲಿಸಿಸ್‌ಗೆ ಅಂತಲೇ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ. ಇದನ್ನೂ ಓದಿ: ಬಳ್ಳಾರಿ ಗಲಭೆ – ಬಂಧನ ಭೀತಿಯಿಂದ ಬಳ್ಳಾರಿ ತೊರೆದ ಕಾರ್ಯಕರ್ತರು


