ಬೆಂಗಳೂರು: ಸಿಗ್ನಲ್ನಲ್ಲಿ ನಿಲ್ಲಿಸಿದ್ದ ಲಾರಿಗೆ (Lorry) ಹಿಂಬದಿಯಿಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಲಾರಿ ಚಾಲಕ (Lorry Driver) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ (Mysore Road Sattelite Bus Stand) ಸಿಗ್ನಲ್ನಲ್ಲಿ ನಡೆದಿದೆ.
ವಿಜಯ್ ಕುಮಾರ್ ಮೃತ ಲಾರಿ ಚಾಲಕ (60). ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಮೈಸೂರು ರಸ್ತೆ ಫ್ಲೈಓವರ್ ಇಳಿಯುತ್ತಿದ್ದಂತೆ ಅಲ್ಲಲ್ಲಿ ವಾಹನಗಳಿಗೆ ಟಚ್ ಮಾಡಿಕೊಂಡು ಬಂದಿರುವ ಹಿಂಬದಿ ಲಾರಿ ಚಾಲಕ ಬಳಿಕ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ನಿಲ್ಲಿಸಿದ್ದ ಲಾರಿಗೆ, ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಕದನ ವಿರಾಮಕ್ಕೆ ಇರಾನ್ ವಿಧಿಸಿದ 10 ಷರತ್ತುಗಳು ಏನು?
ಸ್ವಿಗ್ಗಿ ಇನ್ಸ್ಟಾಮಾರ್ಟ್ಗೆ ತರಕಾರಿ ಪೂರೈಕೆ ಮಾಡುತ್ತಿದ್ದ ಲಾರಿ ಇದಾಗಿದ್ದು, ಕೋಲಾರದ ಮಾಲೂರಿನಿಂದ ಆರ್ಆರ್ ನಗರಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಹಿಂಬದಿ ಲಾರಿ ಚಾಲಕ ವಿಜಯ್ ಕುಮಾರ್ ದೇಹ ನಜ್ಜುಗುಜ್ಜಾಗಿದೆ. ಸದ್ಯ ಅಪಘಾತಕ್ಕೊಳಗಾದ ವಾಹನವನ್ನು ಸಂಚಾರಿ ಪೊಲೀಸರು ತೆರವುಗೊಳಿಸಿದ್ದಾರೆ. ಚಾಲಕನ ಮೃತದೇಹವನ್ನು ಕೆಆರ್ ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಅಮೆರಿಕ-ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

