ಸುದೀಪ್ ಮನೆಯಿಂದ ಮತ್ತೊಬ್ಬ ಸ್ಟಾರ್: ಸಂಚಿತ್ ಚಿತ್ರಕ್ಕೆ ಮುಹೂರ್ತ

Public TV
1 Min Read

ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ (Sanchit Sanjeev) ಇಂದು ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಚಿತ್ ಸಂಜೀವ ನಟಿಸಿ, ನಿರ್ದೇಶನ ಮಾಡಲಿರುವ ಚಿತ್ರಕ್ಕೆ ಇಂದು ಬೆಂಗಳೂರಿನ ಗವಿಪುರಂನ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ (Muhurta) ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದರು.

ಪ್ರಿಯಾ ಸುದೀಪ್, ಲಹರಿ ಸಂಸ್ಥೆ ಹಾಗೂ ಕೆ.ಪಿ.ಶ್ರೀಕಾಂತ್ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ನಟನೆಯ ಜೊತೆ ಸಂಚಿತ್ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. ಕ್ರೈಂ-ಡ್ರಾಮಾ ಆಧರಿಸಿದ ಸಿನಿಮಾದಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆಯಂತೆ. ಸುದೀಪ್ (Kichcha Sudeep) ಸಲಹೆಯಂತೆ ಸಂಚಿತ್ ಈ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಬಹುತೇಕ ಹೊಸಬರೇ ಕೂಡಿಕೊಂಡು ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್

ಸಾಕಷ್ಟು ಸಮಯದಿಂದ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಇದೀಗ ಅದು ನೆರವೇರಿದೆ. ಹಾಗಂತ ಸಂಚಿತ್ ದಿಢೀರ್ ಅಂತ ಸಿನಿಮಾ ರಂಗಕ್ಕೆ ಬರುತ್ತಿಲ್ಲ. ಈಗಾಗಲೇ ಕಿಚ್ಚನ ‘ಅಂಬಿ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕ್ಯಾಮೆರಾ ಮುಂದೆ ಅಲ್ಲ ಹಿಂದೆ ಗುರುತಿಸಿಕೊಂಡಿದ್ದರು. ಜೊತೆಗೆ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ.

 

ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ಈ ಜೋಡಿಯ ಯಾದಿಗೆ ಇದೊಂದು ಚಿತ್ರ ಸೇರ್ಪಡೆಯಾಗಿದೆ.

Share This Article