ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

Public TV
1 Min Read

ಬೆಂಗಳೂರು: ಇತ್ತೀಚೆಗಷ್ಟೇ ನೆಲಮಂಗಲದ ಬಳಿ ಸರಣಿ ಅಪಘಾತವೊಂದು ನಡೆದು ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಸರಣಿ ಅಪಘಾತ ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಆಟೋ ಚಾಲಕ ಓವರ್‌ ಟೇಕ್‌ ಮಾಡಲು ಬಂದಾಗ ಕೆಎಸ್‌ಆರ್‌ಟಿಸಿ ಬಸ್ & ಆಟೋ ಮಧ್ಯೆ ಭೀಕರ ಅಪಘಾತ ನಡೆದಿದೆ. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಗುದ್ದಿ ಆಚೆ ಬಂದ ಪರಿಣಾಮ ಪಕ್ಕದಲ್ಲಿದ್ದ ಗಾಡಿಗಳಿಗೂ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಾಜು ಪುಡಿಪುಡಿಯಾಗಿದೆ, ಡೋರ್‌ ಸಂಪೂರ್ಣ ಹಾನಿಯಾಗಿದೆ. 1 ಎಲೆಕ್ಟ್ರಿಕ್‌ ಕೆಎಸ್‌ಆರ್‌ಟಿಸಿ, ಇನ್ನೊಂದು ರೆಡ್ ಬಸ್ ಕೆಎಸ್‌ಆರ್‌ಟಿಸಿ, ಒಂದು ಕಾರು, ಆಟೋ ಸಂಪೂರ್ಣ ಜಖಂಗೊಂಡಿದೆ. ಸದ್ಯ ಇಬ್ಬರು ಚಾಲಕರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಘಟನೆ ನಡೆದಿದೆ.

Share This Article