ಸಲ್ಮಾನ್ ಖಾನ್ ಹತ್ಯೆಗೆ ಮತ್ತೊಂದು ಸಂಚು – ಬಿಷ್ಣೋಯ್ ಸೇರಿ 17 ಮಂದಿ ವಿರುದ್ಧ ಎಫ್‌ಐಆರ್

Public TV
1 Min Read

ಮುಂಬೈ: ಲಾರೆನ್ಸ್ ಬಿಷ್ಣೋಯ್  (Lawrence Bishnoi) ತಂಡದ ನಾಲ್ವರು ಸದಸ್ಯರು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹತ್ಯೆಗೆ ಸಂಚು ರೂಪಿಸಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ನವಿ ಮುಂಬೈ ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ಧನಂಜಯ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಾಸ್ಪಿ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ರಿಜ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಮತ್ತೆ ಬಾಂಬ್ ಬೆದರಿಕೆ

ಆರೋಪಿಗಳು ಪನ್ವೇಲ್‌ನಲ್ಲಿರುವ ಫಾರ್ಮ್ಹೌಸ್‌ನಲ್ಲಿ ಸಲ್ಮಾನ್ ಖಾನ್ ಅವರ ಕಾರಿನ ಮೇಲೆ ದಾಳಿ ನಡೆಸಲು ಯೋಜಿಸಿದ್ದರು. ಇದಕ್ಕಾಗಿ ಪಾಕಿಸ್ತಾನದ (Pakistan) ಪೂರೈಕೆದಾರರಿಂದ ಶಸ್ತಾçಸ್ತçಗಳನ್ನು ಸಂಗ್ರಹಿಸುವ ಸಂಚು ಕೂಡ ರೂಪಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿ ಅಜಯ್ ಕಶ್ಯಪ್ ಪಾಕಿಸ್ತಾನದಲ್ಲಿ ಡೋಗಾ ಎಂಬ ವ್ಯಕ್ತಿಯೊಂದಿಗೆ M-16, AK-47 ಮತ್ತು AK-92 ಅನ್ನು ಖರೀದಿಸಲು ಸಂಪರ್ಕದಲ್ಲಿದ್ದರು ಎಂದು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶ

ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಗೋಲ್ಡಿ ಬ್ರಾರ್, ಸಂಪತ್ ನೆಹ್ರಾ ಸೇರಿದಂತೆ 17 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮುಂದೆ ಏಪ್ರಿಲ್ 14 ರಂದು ಬೆಳಿಗ್ಗೆ 5 ಗಂಟೆಗೆ ಗುಂಡಿನ ದಾಳಿ ನಡೆದಿತ್ತು. ಎರಡು ಬೈಕ್‌ಗಳಲ್ಲಿ ಬಂದ ದಾಳಿಕೋರರು ಐದು ಸುತ್ತು ಗುಂಡು ಹಾರಿಸಿದ್ದರು. ಗುಂಡಿನ ದಾಳಿ ವೇಳೆ ಸಲ್ಮಾನ್ ಮನೆಯಲ್ಲಿದ್ದರು. ಘಟನೆಯ ನಂತರ ಸಲ್ಮಾನ್ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಎರಡು ದಿನಗಳ ನಂತರ ಗುಂಡು ಹಾರಿಸಿದ ಆರೋಪಿಗಳಿಬ್ಬರೂ ಸಿಕ್ಕಿಬಿದ್ದರು. ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್‌ನಿಂದ ಖಾನ್‌ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್ ಎಸ್‌ಐಟಿ ತನಿಖೆಗೆ – ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ತನಿಖಾ ತಂಡ

Share This Article