ಮುಂಬೈ: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ಕೇವಲ ಎರಡು ಫೋಟೋಗಳನ್ನು ಜೋಡಿ ಬಿಡುಗಡೆ ಮಾಡಿತ್ತು. ಆದರೆ ಈಗ ದೀಪ್‍ವೀರ್ ಮದುವೆಯ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.
ನವೆಂಬರ್ 14ರಂದು ಕೊಂಕಣಿ ಸಂಪ್ರದಾಯದಂತೆ ಮದುವೆಯಾದ ರಣ್‍ವೀರ್-ದೀಪಿಕಾ ತಮ್ಮ ಕುಟುಂಬಸ್ಥರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
Us and ours ❤️❤️❤️ #MrsandMrRanveerSingh #deepveerkishaadi #ranveerkishaadi
ರಣ್‍ವೀರ್ ಅವರ ಸ್ಟೈಲಿಸ್ಟ್ ಆದ ನಿತಾಶಾ ಗೌರವ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ದೀಪ್‍ವೀರ್ ಫ್ಯಾಮಿಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನವಜೋಡಿ ಜೊತೆ ರಣ್‍ವೀರ್ ತಾಯಿ ಅಂಜಿ ಭವ್ನಾನಿ, ಅವರ ಸಂಬಂಧಿಕರು ಹಾಗೂ ಅವರ ಸ್ನೇಹಿತರು ಕಾಣಿಸಿಕೊಂಡಿದ್ದಾರೆ.
ರಣ್‍ವೀರ್ ಸ್ಟೈಲಿಸ್ಟ್ ಫ್ಯಾಮಿಲಿ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನನ್ನದು ಹಾಗೂ ನಮ್ಮದು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಂತರ ಸುದ್ದಿ ಸಂಸ್ಥೆಯೊಂದು ದೀಪಿಕಾ ಕುಟುಂಬದವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
Visual of Deepika Padukone & Ranveer Singh with their friends & family after getting married. They got married in a two-day function on November 14-15 in Italy's Lombardy. pic.twitter.com/L77IL7f3it
— ANI (@ANI) November 16, 2018
ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ ಫ್ಯಾಮಿಲಿ ಫೋಟೋದಲ್ಲಿ ದೀಪಿಕಾ ಸ್ಟೈಲಿಸ್ಟ್ ಶಾಲೀನಾ ನತಾನಿ ಹಾಗೂ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಗೇಬ್ರಿಲ್ ಗೋರ್ಜಿಯು ಕಾಣಿಸಿಕೊಂಡಿದ್ದಾರೆ. ಈ ಎರಡು ಫೋಟೋಗಳು ದೀಪಿಕಾ ಹಾಗೂ ರಣ್‍ವೀರ್ ಕೊಂಕಣಿ ಸಂಪ್ರದಾಯದಲ್ಲಿ ಮದುವೆಯಾದ ನಂತರ ಕ್ಲಿಕ್ಕಿಸಿದ ಫೋಟೋ ಆಗಿದೆ.
ನಿತಾಶಾ ಈ ಮೊದಲು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ರಣ್‍ವೀರ್ ತಂದೆ ಜಗ್‍ಜಿತ್ ಸಿಂಗ್ ಭವ್ನಾನಿ ಅವರು ಮದುವೆಯಾದ ನಂತರ ದೀಪಿಕಾಗೆ “ಯೇ ದಿವಾನಿ ತೋ ಭವ್ನಾನಿ ಹೋ ಗಯಿ” ಎಂದು ಹೇಳಿದ್ದಾರೆಂದು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews