ಕೊಡಗಿನ ಚೆಂಬು, ಪೆರಾಜೆಯಲ್ಲಿ ಮತ್ತೆ ಕಂಪಿಸಿದ ಭೂಮಿ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪನ ಮುಂದುವರೆದಿದೆ. ಜನರಲ್ಲಿ ಕಂಪನದ ಆತಂಕ ದೂರಾಗುವ ಮುನ್ನವೇ ಪದೇಪದೇ ಭೂಮಿ ಕಂಪಿಸುತ್ತಿದೆ.

ಭಾನುವಾರ ರಾತ್ರಿ ಸುಮಾರು 9:20ಕ್ಕೆ ಭೂಮಿ ಕಂಪಿಸಿದೆ. ಇದು ಕಳೆದೊಂದು ವಾರದಿಂದ ಈವರೆಗೆ 9ನೇ ಬಾರಿಯ ಕಂಪನವಾಗಿದೆ. ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಭಾಗದಲ್ಲಿ ಭಾರೀ ಶಬ್ದದೊಂದಿಗೆ ಸಣ್ಣ ಪ್ರಮಾಣದ ಭೂಮಿ ಕಂಪನದ ಅನುಭವವಾಗಿದೆ.

ಚೆಂಬು ಗ್ರಾಮದಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ನೈಸರ್ಗಿಕ ವಿಕೋಪ ಅಧ್ಯಯನ ತಂಡ ಭೇಟಿ ಕೊಟ್ಟಿದ್ದು, ವೈಜ್ಞಾನಿಕ‌ ಅಧಿಕಾರಿ ಡಾ. ಜಗದೀಶ್ ನೇತೃತ್ವದಲ್ಲಿ ವೀಕ್ಷಣೆ ನಡೆಸಲಾಗಿತ್ತು. ಚೆಂಬು ಪ್ರೌಢ ಶಾಲೆಯಲ್ಲಿ ಸಿಸ್ಮೋಮೀಟರ್​​​ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ

ಕೊಡಗಿನಲ್ಲಿ ಪದೇ ಪದೇ ಭೂಕಂಪನ
> ಜೂನ್ 23:- ಬೆಳಗ್ಗೆ 4:37 – ಮಲುಗಾನಹಳ್ಳಿ (ಹಾಸನ) 3.4ರಷ್ಟು ತೀವ್ರತೆ
> ಜೂನ್ 26:- ಬೆಳಗ್ಗೆ 9:09 – ಕರಿಕೆ (ಕೊಡಗು) 3.2ರಷ್ಟು ತೀವ್ರತೆ
> ಜೂನ್ 28:- ಬೆಳಗ್ಗೆ 7:45 – ಚೆಂಬು (ಕೊಡಗು) 3ರಷ್ಟು ತೀವ್ರತೆ
> ಜೂನ್ 28:- ಸಂಜೆ 4.40 – ಚೆಂಬು (ಕೊಡಗು) 3ರಷ್ಟು ತೀವ್ರತೆ
> ಜೂನ್ 30:- ರಾತ್ರಿ 1, 1:40 – ಸಂಪಾಜೆ, ಪೆರಾಜೆ, ಗೂನಡ್ಕ 1.8ರಷ್ಟು ತೀವ್ರತೆ
> ಜುಲೈ 1:- ಬೆಳಗ್ಗೆ 2 ಬಾರಿ – ಕೊಡಗಿನ ಗಡಿ 1.8ರಷ್ಟು ತೀವ್ರತೆ
> ಜುಲೈ 2:- ಮಧ್ಯಾಹ್ನ 1.21 – ಚೆಂಬು, ಕರಿಕೆ, ಪೆರಾಜೆ 1.8ರಷ್ಟು ತೀವ್ರತೆ
> ಜುಲೈ 2:- ರಾತ್ರಿ 8:30 – ಚೆಂಬು, ಕರಿಕೆ, ಪೆರಾಜೆ 1.8ರಷ್ಟು ತೀವ್ರತೆ
> ಜುಲೈ 4:- ರಾತ್ರಿ 9.20 – ಚೆಂಬು, ಪೆರಾಜೆ ಲಘು ಭೂಕಂಪ

ಭಾರೀ ಮಳೆ:
ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮದ ರಸ್ತೆಯ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಮೊಣ್ಣಂಗೇರಿ ಗ್ರಾಮದ ಕೊಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಣ್ಣ ಪ್ರಮಾಣದ ಮಳೆಯ ನಡುವೆಯೇ ಇಷ್ಟೊಂದು ಅವಾಂತರಗಳಾದರೆ, ಅಬ್ಬರ ಮಳೆ ಬಂದರೆ ಹೇಗೆಂದು ಕೊಡಗು ಜನತೆ ಕಂಗಾಲಾಗಿದ್ದಾರೆ.

ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಮಳೆ ಹಿನ್ನೆಲೆ ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆ ಸಂಚಾರ ಬಂದ್ ಆಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ 2 ಅಡಿಗೂ ಅಧಿಕ ನೀರು ನಿಂತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ನೀರಿನಲ್ಲೇ ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಯಿಂದ ಕೋರಂಗಾಲದ ವಾಜಪೇಯಿ ವಸತಿ ಶಾಲೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಾಲೆಗೆ 8 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಪ್ರವಾಹದ ನೀರಿನಲ್ಲೇ ತಂತಮ್ಮ ಊರುಗಳತ್ತ ಹೊರಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *