ಚಿತ್ರದುರ್ಗ ಶಾಸಕನಿಂದ ಮತ್ತೊಂದು ಯಡವಟ್ಟು – ಬೆಂಕಿಯಿಡಲು ಪ್ರಚೋದಿಸಿದ ವಿಡಿಯೋ ವೈರಲ್

Public TV
2 Min Read

ಚಿತ್ರದುರ್ಗ: ಚಿತ್ರದುರ್ಗ (Chitradurga) ಶಾಸಕ ವೀರೇಂದ್ರ ಪಪ್ಪಿಯ (Veerendra Pappi) ಹಾಸ್ಟೆಲ್ ವಾರ್ಡನ್‌ಗೆ ಹೊಡೆಯಿರಿ ಎಂಬ ಹೇಳಿಕೆ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹೇಳಿಕೆ ನೀಡಿ ಇನ್ನೊಂದು ಯಡವಟ್ಟು ಮಾಡಿಕೊಂಡಿದ್ದಾರೆ.

ಹಿರೇಗುಂಟನೂರು (Hireguntanur) ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿ ಮಹಿಳೆಯರು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಬಳಿ ದೂರು ಹೇಳಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮದಲ್ಲಿ ತೊಂದರೆ ಉಂಟಾಗುತ್ತಿದ್ದು, ಕುಡಿದು ಬಂದು ಪುರುಷರಿಂದ ದಿನನಿತ್ಯ ಮನೆಗಳಲ್ಲಿ ಗಲಾಟೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಯಾರೂ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಮೃತ್ ಭಾರತ್; ರಾಜ್ಯದ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ – ಮೋದಿಯಿಂದ ಇಂದು ಚಾಲನೆ

ನಿಮಗೆ ಕೈ ಮುಗಿಯುತ್ತೇವೆ, ಅಕ್ರಮ ಮದ್ಯ ಮಾರಾಟ ತಡೆಯಿರಿ. ಈಗಲೇ ನಮ್ಮ ಜೊತೆಗೆ ಬನ್ನಿ ತೋರಿಸುತ್ತೇವೆ ಎಂದು ಶಾಸಕರಲ್ಲಿ ಮಹಿಳೆ ಮನವಿ ಮಾಡಿದ್ದಾರೆ. ಈ ವೇಳೆ ಶಾಸಕ ವೀರೇಂದ್ರ ಪಪ್ಪಿ ಅಧಿಕಾರಿಗಳನ್ನು ಕಳುಹಿಸಿ ಕೊಡುತ್ತೇನೆ ಎಂದಿದ್ದಾರೆ. ಈ ಸಂದರ್ಭ ಮಹಿಳೆ, ಇಷ್ಟು ಹೇಳಿದ್ದೇವೆ. ಮುಂದೆ ಅವರ ಮನೆಗೆ ಬೆಂಕಿ ಇಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಎಡವಟ್ಟು- ಒಂದೇ ಹೆಸರಿನವರ ರಿಪೋರ್ಟ್ ಅದಲು ಬದಲಾಗಿ ಚಿಕಿತ್ಸೆ

ಮಹಿಳೆಯ ಈ ಮಾತಿಗೆ ಬೆಂಬಲ ನೀಡಿದ ಶಾಸಕ, ನೀನು ಇಡಮ್ಮ. ನಾನಿದ್ದೇನೆ. ಯಾಕೆ ಯೋಚನೆ ಮಾಡುತ್ತೀಯಾ ಎಂದು ಮಹಿಳೆಯನ್ನು ಬೆಂಕಿ ಇಡಲು ಪ್ರಚೋದಿಸಿದ್ದಾರೆ. ಇದೀಗ ಬೆಂಕಿ ಇಡಲು ಪ್ರಚೋದಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದೇ ರೀತಿ ಶನಿವಾರ ಕಾನೂನು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಸಂದರ್ಭ ಹಾಸ್ಟೆಲ್ ವಾರ್ಡನ್ ಅನ್ನು ರೂಮಿಗೆ ಹಾಕಿ ಹೊಡೆಯಿರಿ ಎಂದು ಶಾಸಕರು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದ ವಿಡಿಯೋ ಸಹ ಎಲ್ಲೆಡೆ ವೈರಲ್ ಆಗಿತ್ತು. ಇದನ್ನೂ ಓದಿ: ಕಳಪೆ ಊಟ ಕೊಟ್ಟರೆ ವಾರ್ಡನ್‍ಗೆ ತಿನ್ನಿಸಿ, ಹೊಡೆಯಿರಿ – ಶಾಸಕರ ಹೇಳಿಕೆ ವೈರಲ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್