ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್

Public TV
1 Min Read

ನವದೆಹಲಿ: ಟ್ವಿಟ್ಟರ್ (Twitter) ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಮೈಕ್ರೋಬ್ಲಾಗಿಂಗ್ (Microblogging) ವೆಬ್‌ಸೈಟ್ ಬಳಕೆದಾರರಿಗೆ ಮತ್ತೊಂದು ಮಹತ್ತರ ಬದಲಾವಣೆಯನ್ನು ಘೋಷಿಸಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿರುವ ‘ನಿಮಗಾಗಿ’ (ಫಾರ್ ಯೂ) ಪುಟವು ಏಪ್ರಿಲ್ 15ರಿಂದ ವೆರಿಫೈಡ್ (Verified) ಖಾತೆಗಳನ್ನು ಮಾತ್ರ ಹೊಂದಿರುತ್ತದೆ. ಲೆಗಸಿ ವೆರಿಫಿಕೇಷನ್ (Legacy Verification) ಹೊಂದಿರುವ ಎಲ್ಲಾ ಬಳಕೆದಾರರು ಮುಂದಿನ ತಿಂಗಳು ತಮ್ಮ ಬ್ಯಾಡ್ಜ್‌ಗಳನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ ತಿಂಗಳಿಗೆ 8 ಡಾಲರ್‌ಗೆ ಟ್ವಿಟ್ಟರ್ ಬ್ಲೂ ನೋಂದಾಯಿಸಿಕೊಳ್ಳುವವರು ಮಾತ್ರ ತಮ್ಮ ಬ್ಲೂ ಟಿಕ್ (Blue Tick) ಉಳಿಸಿಕೊಳ್ಳುತ್ತಾರೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

“ಏಪ್ರಿಲ್ 15ರಿಂದ, ಪರಿಶೀಲಿಸಿದ ಖಾತೆಗಳು ಮಾತ್ರ ನಿಮಗಾಗಿ ಶಿಫಾರಸುಗಳಲ್ಲಿ ಇರಲು ಅರ್ಹವಾಗಿರುತ್ತವೆ. ಸುಧಾರಿತ ಎಐ ಬೋಟ್ ಸಮೂಹಗಳನ್ನು ನಿಭಾಯಿಸಲು ಇದು ಏಕೈಕ ನೈಜ ಮಾರ್ಗವಾಗಿದೆ. ಇಲ್ಲದಿದ್ದರೆ ಇದು ನಿರಾಶಾದಾಯಕ ಸೋಲಿನ ಯುದ್ಧವಾಗಿದೆ. ಮತಗಟ್ಟೆಗಳಲ್ಲಿ ಮತದಾನ ಪರಿಶೀಲನೆಯ ಅಗತ್ಯವಿದೆ. ಅದೇ ಕಾರಣಕ್ಕಾಗಿ ಈ ಪರಿಶೀಲನೆ.” ಎಂದು ಎಲಾನ್ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು

Share This Article