ಹುಬ್ಬಳ್ಳಿ: ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ (Hubballi) ಕೆಎಂಸಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಪತ್ತೆಯಾಗಿದೆ.’
ಸೆ.23 ರಂದು ಕುಂದಗೋಳ ತಾಲೂಕಿನ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕೆಎಂಸಿಗೆ ದಾಖಲಾಗಿದ್ದರು. ಸುರಕ್ಷಿತವಾಗಿ ಮಹಿಳೆಗೆ ಹೆರಿಗೆ ಸಹ ಆಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿತ್ತು. ಇದನ್ನೂ ಓದಿ: ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ
ಮಗುವಿನ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡುಬಂದಿವೆ. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆಯ ಬೆಳೆವಣಿಗೆ ಆಗುತ್ತಿರುವುದು ವೈದ್ಯರು ಗುರುತಿಸಿದ್ದಾರೆ.
ಇದು ಬಹಳಷ್ಟು ಅಪರೂಪದ ಪ್ರಕರಣ ಅಸಹಜ ದ್ರವ್ಯ ಸಂಗ್ರಹಣೆ ಇಂತಹ ಬೆಳವಣಿಗೆ ಆಗುತ್ತವೆ. ಅದು ಪೂರ್ಣಗೊಂಡು ಮಗುವಿನ ರೂಪ ಪಡೆದುಕೊಳ್ಳುವುದು ಅಸಾಧ್ಯ. ಹೀಗಾಗಿ ಇನ್ನೂ ಕೆಲವೊಂದು ತಪಾಸಣೆ ಮಾಡಿ, ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅಂತ ಕೆಎಂಸಿ ಆಡಳಿತ ಮಂಡಳಿ ಹೇಳಿದೆ.