ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕಿಟ್ಟಿ ಪಾರ್ಟಿ (Kitty Party) ಆಯೋಜಿಸಿ 50 ಕೋಟಿ ಹಣ ವಂಚನೆ ಪ್ರಕರಣ ಸಂಬಂಧ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ವಂಚಕಿ ಸವಿತಾಳ ಪರ ಲಾಯರ್ ಎಂದು ಎಂಟ್ರಿ ಕೊಟ್ಟು ಎಸಿಪಿ, ಸಬ್ ಇನ್ಸ್ಪೆಕ್ಟರ್‌ಗೆ ಅವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಕಲಿ ವಕೀಲ ಯೋಗಾನಂದನನ್ನು (52) ಬಂಧಿಸಲಾಗಿದೆ. ಈತ ವಂಚಕಿ ಸವಿತಾಳನ್ನು ಹೇಗೆ ಅರೆಸ್ಟ್ ಮಾಡಿದ್ರಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ. ಅಲ್ಲದೇ ಆರೋಪಿ ಸವಿತಾ ಬಳಿಯಿದ್ದ ಮನೆ ಕೀ ಹೊರಗೆ ತೆಗೆದುಕೊಂಡು ಹೋಗ್ತಿದ್ದ ವೇಳೆ ಆರೋಪಿ ಕೀ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅಡ್ಡ ಹಾಕಿದ್ದ ಪೊಲೀಸರಿಗೆ ಅದ್ಹೇಗೆ ಕೀ ಕಿತ್ತುಕೊಳ್ತೀರೋ ನೋಡ್ತೀನಿ ಎಂದು ನಕಲಿ ವಕೀಲ ಯೋಗಾನಂದ ಅವಾಜ್ ಹಾಕಿದ್ದ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

ಈತನ ರಂಪಾಟವನ್ನ ಗಮನಿಸಿದ್ದ ಕೆಪಿ ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜ್ ಈತನ ಕೇಸ್ ಹಿಸ್ಟರಿ ತೆಗೆದಾಗ ಹಳೆ ಕೇಸ್‌ನಲ್ಲಿ ಮುದುಕಿಗೆ ಯೋಗಾನಂದ್ ಹೊಡೆದಿದ್ದರ ಮಾಹಿತಿ ಸಿಕ್ಕಿದೆ. ಆಗ ಬಸವೇಶ್ವರ ನಗರ ಎಸ್‌ಐ ಆಗಿದ್ದ ಗೋವಿಂದರಾಜ್ ಈತನನ್ನು ಬಂಧಿಸಿದ್ದರು. ಆಗ ನಾನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ಯೋಗಾನಂದ್‌ನನ್ನು ಈಗ ಮತ್ತೆ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

ಪ್ರಕರಣ ಏನು?
20ಕ್ಕೂ ಹೆಚ್ಚು ಮಹಿಳೆಯರಿಗೆ 50 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರು ಸವಿತಾ ಎಂಬಾಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪನ ಅನುಭವ – ಬೆಚ್ಚಿಬಿದ್ದ ಜನ

ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಎಂಬಿ ಪಾಟಿಲ್ ಹೆಸರೇಳಿ ಗಾಳ ಹಾಕ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಕೇಸ್ ದಾಖಲಾಗಿ ಬಂಧನವಾಗಿ ಬೇಲ್ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾಳೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

Share This Article