ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ

Public TV
1 Min Read

ಚೆನ್ನೈ: ದಿವಂಗತ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳಿಗೆ ‘ಅಣ್ಣಾಥೆ’ ಸಿನಿಮಾ ತಂಡ ಸಿಹಿಸುದ್ದಿ ನೀಡಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಸನ್ ಪಿಕ್ಚರ್ಸ್ ಈ ಕುರಿತು ಟ್ಚಿಟರ್ ನಲ್ಲಿ, ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ರಜನಿಕಾಂತ್ ಅಭಿನಯದ ‘ಅಣ್ಣಾಥೆ’ ಚಿತ್ರದ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೇ ಅ.4 ರಂದು ಸಂಜೆ 6 ಗಂಟೆಗೆ ಎಸ್‍ಪಿಬಿ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ಟ್ಚೀಟ್ ಮಾಡುವ ಮೂಲಕ ಖಚಿತಪಡಿಸಿದೆ.  ಇದನ್ನೂ ಓದಿ: ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

ಈ ಹಾಡು ನಿಜಕ್ಕೂ ವಿಶೇಷವಾಗಿದೆ ಏಕೆಂದರೆ ಇದು ರಜನಿಕಾಂತ್ ಅಭಿನಯದ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊನೆಯ ಹಾಡು ಆಗಿದೆ. ಈ ಹಾಡನ್ನು ಡಿ ಇಮ್ಮಾನ್ ಸಂಯೋಜಿಸಿದ್ದಾರೆ. ಇದನ್ನು ಕಳೆದ ವಾರ ಎಸ್‍ಪಿಬಿಯ ಮೊದಲ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ ತಯಾರಕರು ಅದನ್ನು ಬಿಡುಗಡೆ ಮಾಡಿರಲಿಲ್ಲ.

ಈ ಚಿತ್ರಕ್ಕೆ ಸಿರುತೈ ಶಿವ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣವು ಅಂತಿಮ ಹಂತದಲ್ಲಿದೆ. ಈ ಚಿತ್ರವನ್ನು ದೀಪಾವಳಿಯಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಬಹಳ ದಿನಗಳ ಬಳಿಕ ಸೂಪರ್ ಸ್ಟಾರ್ ರಜನಿ ಗ್ರಾಮೀಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ಹಳ್ಳಿಯ ಮುಖ್ಯಸ್ಥರಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

ಈ ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬು, ಮೀನಾ, ಪ್ರಕಾಶ್ ರಾಜ್, ಸತೀಶ್ ಮತ್ತು ಸೂರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.

Share This Article
Leave a Comment

Leave a Reply

Your email address will not be published. Required fields are marked *