80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಗೆ ಅನ್ನ-ಸುವಿಧಾ

Public TV
1 Min Read

ಬೆಂಗಳೂರು: ನಮಗೆ ವಯಸ್ಸಾಯ್ತು.. ಮನೆಯಿಂದ ಹೊರಗೆ ಹೋಗೋಕೆ ಆಗಲ್ಲ, ದಿನಸಿ ತರೋಕೆ ಆಗಲ್ಲ, ನಮಗೆ ಯಾರೂ ಆಸರೆ ಇಲ್ಲ ಎಂದು ಚಿಂತೆಯಲ್ಲಿರುವವರಿಗೆ ನೆರವಾಗಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ.


80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳ ಮನೆ ಬಾಗಿಲಿಗೆ ಆಹಾರ (Food) ಧಾನ್ಯ ತಲುಪಿಸಲು ಅನ್ನ-ಸುವಿಧಾ (Anna Suvidha) ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ. ಅನ್ನ-ಸುವಿಧಾ (Anna Suvidha) ಯೋಜನೆಯಡಿಯಲ್ಲಿ ಹೋಮ್‌ ಡೆಲಿವರಿ ಆಪ್‌ ಮೂಲಕ ಆಹಾರ ಧಾನ್ಯ ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ ಎಂಬ ಘೋಷವಾಕ್ಯದಂತೆ ರಾಜ್ಯ ಸರ್ಕಾರ ನೆರವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share This Article