ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

Public TV
1 Min Read

– ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ  ಲಾರಿ ಮಾಲೀಕರು

ಬೆಂಗಳೂರು: ಸರ್ಕಾರದ ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಮತ್ತೊಂದು ವಿಘ್ನ ಎದುರಾಗಿದೆ. ಬಾಡಿಗೆ ನೀಡದ ಸರ್ಕಾರದ ವಿರುದ್ದ ಲಾರಿ ಚಾಲಕರು ಮತ್ತು ಮಾಲೀಕರು ಆಕ್ರೋಶ ಹೊರಹಾಕಿ ಆಹಾರ ಧಾನ್ಯ ಸಾಗಾಣಿಕೆಯನ್ನು ಇಂದಿನಿಂದ ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ಫೆಬ್ರವರಿಯಿಂದ ಮೇ ತಿಂಗಳವರೆಗೆ ಸರ್ಕಾರ ಬಾಕಿ ಮೊತ್ತ ಪಾವತಿಸಿಲ್ಲ. ಬಾಕಿ ಹಣ ಪಾವತಿಯಾಗುವವರೆಗೆ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವುದಿಲ್ಲ. ಹಣ ಪಾವತಿಯಾಗದ ಕಾರಣ ಮೂರರಿಂದ ನಾಲ್ಕು ಸಾವಿರ ಲಾರಿ ಮಾಲೀಕರು ಕಂ ಚಾಲಕರು ಸಂಕಷ್ಟದಲ್ಲಿದ್ದಾರೆ. ಮುಷ್ಕರದಿಂದ ಯಶವಂತ‌ಪುರ ಎಂಪಿಎಂಸಿ, ಚಾಮರಾಜಪೇಟೆ ಲಾರಿ ಸ್ಟ್ಯಾಂಡ್‌ ಬಳಿ‌ ಲಾರಿಗಳು ನಿಂತಲ್ಲೇ ನಿಂತಿವೆ. ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

 

ಸರ್ಕಾರ ಅನ್ನಭಾಗ್ಯ ಅಕ್ಕಿ ಸಾಗಣೆಯ ಸುಮಾರು 260 ಕೋಟಿ ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಇಂದಿನಿಂದ ಬಂದ್‌ಗೆ ಕರೆ ನೀಡಿವೆ ಎಂದು ಲಾರಿ‌ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

ಬಾಡಿಗೆ ನೀಡದ ಕಾರಣ ಇಪಿಎಫ್, ಇಎಸ್ಐ ಕಟ್ಟಿಲ್ಲ. ಸರ್ಕಾರದ ಜೊತೆಗೆ ಅಧಿಕಾರಿಗಳೇ ಓಡಿಸಿಕೊಳ್ಳಲಿ. ಸಾಗಾಣಿಕೆ ಟೆಂಡರ್‌ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ನೀಡಿದ ನಂತರವೂ ಗುತ್ತಿಗೆದಾರರಿಗೆ ಮರುಪಾವತಿ ಮಾಡಿಲ್ಲ. ಆಯ್ಕೆಯಾಗದ ಬಿಡ್‌ದಾರರಿಗೂ ಇಎಂಡಿ ಹಣ ಹಿಂತಿರುಗಿಸಿಲ್ಲ. ಒಂದು ದಿನ ತೆರಿಗೆ ಕಟ್ಟದೇ ಇದ್ದರೆ ದಂಡ ವಿಧಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

Share This Article