ಜಾಮಿಯಾ ಮಸೀದಿ ವಿವಾದಕ್ಕೆ ದಿನಕ್ಕೊಂದು ಟ್ವಿಸ್ಟ್ – ವೀಡಿಯೋ ಸತ್ಯ ಬಯಲು

Public TV
2 Min Read

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಅಲ್ಲದೇ ಈ ಮಸೀದಿಯ ವಿಚಾರದಲ್ಲಿ ಮತ್ತಷ್ಟು ತಿರುವು ತೆಗೆದುಕೊಳ್ಳುತ್ತಿದೆ.

ಜಾಮಿಯಾ ಮಸೀದಿ ಮಂದಿರವೋ ಅಥವಾ ಮಸೀದಿಯೋ ಎಂದು ನಾವು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಆದ್ರೆ ಪುರಾತತ್ವ ಇಲಾಖೆಗೆ ಸೇರಿದ ಜಾಮಿಯಾ ಮಸೀದಿಯ ಕಟ್ಟಡದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮದರಸವನ್ನು ನಿಲ್ಲಿಸಿಸಬೇಕೆಂದು ಹಿಂದೂಪರ ಸಂಘಟನೆಗಳು ಇದೀಗ ತೀವ್ರತರದಲ್ಲಿ ಹೋರಾಟ ಆರಂಭಿಸವೆ. ಶನಿವಾರ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಈ ಅಕ್ರಮ ಮದರಸದ ವಿರುದ್ಧ ಗುಡುಗಿದರು. ಇದನ್ನೂ ಓದಿ:  ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ 

ವೀಡಿಯೋ ಟ್ವಿಸ್ಟ್
ಶನಿವಾರ ಹಿಂದೂಪರ ಸಂಘಟನೆಗಳು ವೈರಲ್ ಮಾಡಿದ್ದ ಜಾಮಿಯಾ ಮಸೀದಿ ಒಳಭಾಗದಲ್ಲಿ ಕುಳಿತು ಇಬ್ಬರು ಹನುಮ ಭಕ್ತರು ಮಾಡಿದ್ದ ಹನುಮ ಮತ್ತು ರಾಮನ ಭಜನೆಯ ವೀಡಿಯೋ ಅಸಲಿಯತ್ತು ಸಹ ಇಂದು ಗೊತ್ತಾಗಿದೆ. ಈ ವೀಡಿಯೋವನ್ನು ಜೂನ್ 3 ರ ಸಂಜೆ 4 ಗಂಟೆಯ ವೇಳೆಯಲ್ಲಿ ಮಾಡಿರುವುದಾಗಿ ಜಾಮಿಯಾ ಮಸೀದಿ ಸಿಸಿಟಿವಿ ವೀಡಿಯೋ ಪರಿಶೀಲಿಸಿದಾಗ ತಿಳಿದುಬಂದಿದೆ.

ಶ್ರೀರಂಗಪಟ್ಟಣದಲ್ಲಿ ಇಂದು 144 ಸೆಕ್ಷನ್ ಮುಗಿದ್ರು ಸಹ ಪಟ್ಟಣದ್ಯಾಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗ ಬಾರದೆಂದು ಜಾಮಿಯಾ ಮಸೀದಿಗೆ ಇಂದು ಸಹ ಪ್ರವಾಸಿಗರ ನಿರ್ಬಂಧವನ್ನು ಜಿಲ್ಲಾಡಳಿತ ಏರಿದ್ದು, ಜಾಮಿಯಾ ಮಸೀದಿಯ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಸಲಾಗಿದೆ.

ಶ್ರೀರಂಗಪಟ್ಟಣ ಚಲೋ ನಡೆಸಲು ಬಂದ ನೂರಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು. ನಂತರ ಕಿರಂಗೂರು ಸರ್ಕಲ್‍ನ ಬನ್ನಿಮಂಟಪದಲ್ಲಿ ಹನುಮಾನ್ ಚಾಲಿಸ್ ಪಠಣೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮದರಸ ತೆರವು ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಅಧಿಕಾರಿಗಳಿಗೆ 25 ದಿನಗಳ ಗಡುವನ್ನು ನೀಡಿದ್ದಾರೆ. ಒಂದು ಕಡೆ ಜಾಮಿಯಾ ಮಸೀದಿ ವಿವಾದ ತಾರಕಕ್ಕೆ ಏರುತ್ತಿದ್ದು, ಇನ್ನೊಂದು ಕಡೆ ಹೋರಾಟದ ಸ್ವರೂಪಗಳು ತೀವ್ರತೆ ಪಡೆದುಕೊಳ್ಳುತ್ತಿದೆ.

20 ವರ್ಷಗಳಿಂದ ಹೋರಾಟ
ಈ ಹೋರಾಟ ನಿನ್ನೆ, ಮೊನ್ನೆಯಿಂದ ನಡೆಯುತ್ತಿರುವುದಲ್ಲ. 20 ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ ಎಂದು ಗೋತ್ತಾಗಿದೆ. 2004 ಜುಲೈ 1 ರಂದು ಹಿಂದೂ ಮುಖಂಡ ಗಿರೀಶ್ ಹಾಗೂ ಅವರ ಜೊತೆಯಲ್ಲಿದ್ದವರು ಮೈಸೂರಿನ ವಕೀಲ ಕೇಶವಮೂರ್ತಿ ಅವರ ಮೂಲಕ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಪುರಾತತ್ವ ಇಲಾಖೆ, ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದ್ದಾರೆ.

ನೋಟಿಸ್‍ನಲ್ಲಿ ಏನಿದೆ?
ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸ ಮಾಡಲಾಗುತ್ತಿದೆ. ಇಲ್ಲಿ ಗೋಮಾಂಸವನ್ನು ಬೇಯಿಸಿ ತಿನ್ನುತ್ತಿದ್ದಾರೆ. ಈ ಅಕ್ರಮ ಮದರಸವನ್ನು ತೆರವು ಮಾಡಬೇಕೆಂದು ಉಲ್ಲೇಖಿಸುವುದರ ಜೊತೆಗೆ, ಜಾಮಿಯಾ ಮಸೀದಿಯಲ್ಲಿರುವ ದೇವಸ್ಥಾನದ ಕುರುಹುಗಳನ್ನು ನಾಶ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕೆಂದು ನೋಟಿಸ್ ನೀಡಲಾಗಿತ್ತು. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ 

ಈ ವೇಳೆ ಪುರಾತತ್ವ ಇಲಾಖೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಮದರಸ ತೆರವು ಮಾಡಬೇಕೆಂದು ಪತ್ರಬರೆಯಲಾಗಿತ್ತು. ಆದ್ರೆ ಸರ್ಕಾರ ಮತ್ತು ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *