ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

Public TV
1 Min Read

ಪ್ರತಿಷ್ಠಿತ ಧಾರಾವಾಹಿ ʻಲಕ್ಷ್ಮಿ ನಿವಾಸʼದಿಂದ ನಟಿ ಅಂಜಲಿ ಸುಧಾಕರ್ (Anjali Sudhakar) ಹೊರ ನಡೆದಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ರೇಣುಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಅಂಜಲಿ ಸುಧಾಕರ್ ಇತ್ತೀಚೆಗೆ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ದಿಢೀರ್ ಅಂತಾ ಧಾರಾವಾಹಿಯಿಂದಲೇ ಹೊರ ಬಂದಿದ್ದಾರೆ. ಅಂಜಲಿ ಹೊರಬರೋದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

ಅಂಜಲಿ ಸುಧಾಕರ್ ಸೀರಿಯಲ್‌ನಿಂದ (Lakshmi Nivasa Serial) ಹೊರ ಬಂದಿರುವ ಬಗ್ಗೆ ಅವರ ಸ್ನೇಹಿತೆ ವಿಜಯಲಕ್ಷ್ಮಿ ಸುಬ್ರಮಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುದ್ದಾಗಿ ಅಂಜಲಿಯವರನ್ನ ಸಂಪರ್ಕ ಮಾಡಿದಾಗ ಸ್ಪಷ್ಟನೆ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು. ಇತ್ತೀಚೆಗೆ ಪಾತ್ರದ ತಿರುವುಗಳಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ನನ್ನ ಪಾತ್ರವನ್ನ ತುಂಬಾ ನೆಗೆಟಿವ್ ಆಗಿ ಪೋಷಣೆ ಮಾಡುತ್ತಿರೋದು ತುಂಬಾ ಬೇಸರ ಮೂಡಿಸಿದೆ. ಚಾನೆಲ್ ಅವರಿಂದ ಈ ಸಮಸ್ಯೆಯಾಗಿಲ್ಲ ಬದಲಾಗಿ ಧಾರಾವಾಹಿ ತಂಡದಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ ನಟಿ ಅಂಜಲಿ ಸುಧಾಕರ್.

ಇನ್ನು ಈ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಆಚೆ ಬಂದಿರೋದು ಪೇಮೆಂಟ್ ವಿಚಾರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಪೇಮೆಂಟ್ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ, ಕೆಲವು ಬಾರಿ ಡಿಲೇ ಆಗಿದೆ, ಹೊರತು ವೇತನದ ಸಮಸ್ಯೆಯಾಗಿಲ್ಲ ಎಂದಿದ್ದಾರೆ.

ಈ ಮುಂಚೆ ನಟಿ ಶ್ವೇತಾ ಕೂಡಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಇದೀನ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರವನ್ನ ತೊರೆದು ಆಚೆ ಬಂದಿದ್ದಾರೆ.

ನಟಿ ಅಂಜಲಿ ಸುಧಾಕರ್ ಬೇರೆ ಬೇರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿರುವ ಪಾತ್ರದ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಮಾತ್ರ ತುಂಬಾ ನೆಗೆಟಿವ್ ಆಗಿರುವ ಪಾತ್ರದ ಪೋಷಣೆ ನಿರ್ವಹಿಸುವುದು. ಆ ಮೂಲಕ ಜನರು ಸ್ವೀಕರಿಸುವ ರೀತಿ ಕಷ್ಟವಾಗುತ್ತಿರುವ ಕಾರಣದಿಂದ ಈ ಧಾರಾವಾಹಿಯಿಂದ ಆಚೆ ನಡೆದಿದ್ದಾರಂತೆ ನಟಿ ಅಂಜಲಿ ಸುಧಾಕರ್.

Share This Article