ಅನಿರುದ್ಧ ಹೊಸ ಸಿನಿಮಾ ಘೋಷಣೆ : ರಾಚೆಲ್-ನಿಧಿ ಸುಬ್ಬಯ್ಯ ಹೀರೋಯಿನ್ಸ್

Public TV
2 Min Read

ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದ ನಂತರ ಮತ್ತೊಂದು ಸೀರಿಯಲ್ ಮಾಡಲು ಹೊರಟಿದ್ದರು ನಟ ಅನಿರುದ್ಧ (Aniruddha). ಸೂರ್ಯವಂಶ ಹೆಸರಿನ ಆ ಧಾರಾವಾಹಿ ಕೆಲವು ಕಂತುಗಳ ಶೂಟಿಂಗ್ ಕೂಡ ಮಾಡಲಾಗಿತ್ತು. ಆದರೆ, ಏಕಾಏಕಿ ಧಾರಾವಾಹಿ ನಿಂತೇ ಹೋಯಿತು. ಎಸ್.ನಾರಾಯಣ್ ನಿರ್ದೇಶನದಲ್ಲಿ ಅದು ಮೂಡಿ ಬಂದಿತ್ತು. ಆನಂತರ ಮೊನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ನೀಡುವುದಾಗಿ ಅನಿರುದ್ಧ ಹೇಳಿದ್ದರು.

ಹೊಸ ಸುದ್ದಿ ಅಂದಾಕ್ಷಣ ಮತ್ತೊಂದು ಧಾರಾವಾಹಿ ಅಥವಾ ಸೂರ್ಯವಂಶದ ಬಗ್ಗೆಯೇ ಏನಾದರೂ ಅಪ್ ಡೇಟ್ ನೀಡಬಹುದಾ ಎಂದು ಅಂದಾಜಿಸಲಾಗಿತ್ತು. ಕಿರುತೆರೆಯಲ್ಲಿ ಸಾಕಷ್ಟು ಫೇಮಸ್ ಆಗಿರುವ ಅನಿರುದ್ಧ ಮತ್ತೆ ಬಹುಶಃ ಸಿನಿಮಾ ರಂಗದತ್ತ ಹೆಜ್ಜೆ ಹಾಕದೇ ಇರಬಹುದು ಎಂದು ಊಹಿಸಲಾಗಿತ್ತು. ಆದರೆ, ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಅನಿರುದ್ಧ. ಈ ಕುರಿತು ಅವರು ಕೆಲ ಮಾಹಿತಿಗಳನ್ನು ನೀಡಿದ್ದಾರೆ.

‘ನೆನ್ನೆ ನಮ್ಮ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತು. ನಾನು ನಾಯಕ ನಟನಾಗಿ ಪಾತ್ರವಹಿಸುತ್ತಿದ್ದೇನೆ. ರಾಚೆಲ್ ಡೇವಿಡ್ (Rachel David) ಹಾಗೂ ನಿಧಿ ಸುಬ್ಬಯ್ಯ (Nidhi Subbaiah) ಅವರು ಈ ಚಿತ್ರದ ನಾಯಕಿಯರು. ಆನಂದ್ ರಾಜ್ ಅವರು ಈ ನೂತನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೆೇ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆಯುತ್ತಿದ್ದಾರೆ ಎಂದಿದ್ದಾರೆ ಅನಿರುದ್ಧ. ಇದನ್ನೂ ಓದಿ:ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

ಈ ಸಿನಿಮಾಗೆ ಉದಯಲೀಲಾ ಅವರ ಛಾಯಾಗ್ರಹಣ, ವಿಜೇತ್ ಚಂದ್ರ ಅವರ  ಸಂಕಲನ, ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ಅವರ ಡಿ.ಐ. (ವಿಕ್ರಾಂತ್ ರೋಣ ಖ್ಯಾತಿ), ನರಸಿಂಹಮೂರ್ತಿ ಅವರ ಸಾಹಸ ನಿರ್ದೇಶನ ಹಾಗೂ ಮಾಧುರಿ  ಪರಶುರಾಮ್ ಅವರ ನೃತ್ಯ ನಿರ್ದೇಶನವಿರಲಿದೆ.

 

ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಪೂಜೆ ಸಮಾರಂಭ ನಡೆದಿದ್ದು, ಅನಿರುದ್ಧ ಪತ್ನಿ ಕೀರ್ತಿ, ಭಾರತಿ ವಿಷ್ಣುವರ್ಧನ್ (Bharti Vishnuvardhan), ನಟಿಯರಾದ ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್