ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

Public TV
1 Min Read

ಬಾಲಿವುಡ್‌ನ ಹಾಟ್ ಬೆಡಗಿ ತೃಪ್ತಿ ದಿಮ್ರಿ (Tripti Dimri) ಈಗ ಹೊಸ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ತಮಿಳು ನಟ ಧನುಷ್ (Dhanush) ನಟಿಸಲಿರುವ ಬಾಲಿವುಡ್ ಚಿತ್ರದಲ್ಲಿ ‘ಅನಿಮಲ್’ (Animal) ಸುಂದರಿ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ತೃಪ್ತಿ ದಿಮ್ರಿ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಸಕ್ಸಸ್ ನಂತರ ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತೊಂದು ಬಂಪರ್ ಆಫರ್ ಅನ್ನು ನಟಿ ಗಿಟ್ಟಿಸಿಕೊಂಡಿದ್ದಾರೆ.

ಆನಂದ್ ಎಲ್ ರೈ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ನಟ ಧನುಷ್‌ಗೆ ತೃಪ್ತಿ ನಾಯಕಿಯಾಗ್ತಿದ್ದಾರೆ. ಇದೊಂದು ದುರಂತ ಪ್ರೇಮ ಕಥೆಯಾಗಿದ್ದು, ತೃಪ್ತಿ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

ಇನ್ನೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

Share This Article