‘ಹೀರಾಮಂಡಿ’ ಟ್ರೈಲರ್ ನೋಡಿ ಮ್ಯಾಜಿಕಲ್ ಎಂದು ಬಣ್ಣಿಸಿದ ರಶ್ಮಿಕಾ ಮಂದಣ್ಣ

Public TV
1 Min Read

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ‘ಹೀರಾಮಂಡಿ’ (Heeramandi) ವೆಬ್ ಸಿರೀಸ್ ಟ್ರೈಲರ್ ಬಿಡುಗಡೆಯಾಗಿದೆ. ಸ್ಟಾರ್ ಕಲಾವಿದರ ದಂಡೇ ಇರುವ ಹೀರಾಮಂಡಿ ಝಲಕ್ ನೋಡಿ ಬಾಲಿವುಡ್ ನಟ-ನಟಿಯರು ಬೆರಗಾಗಿದ್ದಾರೆ. ಹೀರಾಮಂಡಿ ವೈಭವ ಕಂಡು ರಶ್ಮಿಕಾ ಮಂದಣ್ಣ ಕೂಡ ‘ಮ್ಯಾಜಿಕಲ್’ (Magical) ಎಂದು ಕೊಂಡಾಡಿದ್ದಾರೆ.

 

View this post on Instagram

 

A post shared by Aditi Rao Hydari (@aditiraohydari)

‘ಹೀರಾಮಂಡಿ’ ಟ್ರೈಲರ್ ನೋಡಿ ರಶ್ಮಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಂದರ ಮಹಿಳೆಯರು ಒಂದೆಡೆ ಸೇರಿ ಮ್ಯಾಜಿಕ್ ಅನ್ನು ರಚಿಸಿದಾಗ ನಾನು ಇಷ್ಟಪಡುತ್ತೇನೆ ಎಂದು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಟ್ರೈಲರ್ ಮ್ಯಾಜಿಕಲ್ ಆಗಿದೆ. ತಂಡದ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಷ್ಟೇ ಅಲ್ಲ, ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt), ವಿಕ್ಕಿ ಕೌಶಲ್ ಸೇರಿದಂತೆ ಹಾಡಿಹೊಗಳಿದ್ದಾರೆ.

‘ಹೀರಾಮಂಡಿ’ ವೆಬ್ ಸಿರೀಸ್ ಅನ್ನು ಅದ್ಧೂರಿಯಾಗಿ ಸಂಜಯ್ ಲೀಲಾ ಬನ್ಸಾಲಿ ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ‍್ಯಪೂರ್ವ ಕಾಲದ ಕಹಾನಿಯನ್ನು ಈ ಮೂಲಕ ಹೇಳಲಾಗುತ್ತಿದೆ. ಒಟಿಟಿ ಮೂಲಕ ಮೇ 1ರಂದು ಈ ವೆಬ್ ಸಿರೀಸ್ ವೀಕ್ಷಣೆಗೆ ಸಿಗಲಿದೆ.

ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ (Sonakshi Sinha), ಅದಿತಿ ರಾವ್ ಹೈದರಿ (Aditi Rao Hydari), ರಿಚಾ ಚಡ್ಡಾ, ಶರ್ಮಿನ್ ಸೇಗಲ್, ಸಂಜೀದಾ ಶೇಖ್ ಮುಂತಾದವರು ಹೀರಾಮಂಡಿ ಪ್ರಾಜೆಕ್ಟ್‌ನಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರೋದ್ರಿಂದ ಈ ವೆಬ್ ಸಿರೀಸ್ ಭಾರೀ ನಿರೀಕ್ಷೆಯಿದೆ.

Share This Article