ರಾಜಿಯಾಗುವ ತನಕ ಅವಕಾಶ ಸಿಗಲ್ಲ: ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದ ‘ಅನಿಮಲ್’ ನಟ

Public TV
1 Min Read

ಬಾಲಿವುಡ್ (Bollywood) ನಟ ಸಿದ್ಧಾಂತ್ ಕಾರ್ಣಿಕ್ (Siddhant Karnick) ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ತಮಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅವಕಾಶಕ್ಕಾಗಿ ರಾಜಿಯಾಗಬೇಕು ಎಂದು ವ್ಯಕ್ತಿಯೊಬ್ಬ ಒತ್ತಾಯಿಸಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

2005ರಲ್ಲಿ ನಾನು ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ನಡೆದ ಘಟನೆಯಾಗಿದ್ದು, ಆಗ ನನಗೆ 22 ವರ್ಷ ವಯಸ್ಸುಯಾಗಿತ್ತು. ಚಿತ್ರತಂಡ ವ್ಯಕ್ತಿಯೊಬ್ಬನನ್ನು ನಾನು ಭೇಟಿಯಾದೆ. ನನ್ನ ವಿವರಗಳನ್ನು ಹಿಡಿದು ರಾತ್ರಿ 10:30ಕ್ಕೆ ಮನೆಗೆ ಬರುವಂತೆ ಆ ವ್ಯಕ್ತಿ ಹೇಳಿದ್ದರು. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೆ ಅವರ ಮನೆಯಲ್ಲಿ ಫ್ಯಾಮಿಲಿ ಫೋಟೋ ನೋಡಿದ ಬಳಿಕ ಅದು ಸುರಕ್ಷಿತ ಜಾಗ ಎನಿಸಿತು.

ಸಿನಿಮಾರಂಗದ ನಿಯಮಗಳ ಬಗ್ಗೆ ಆತ ವಿವರಿಸಿದರು. ಬಳಿಕ ರಾಜಿಯಾಗಬೇಕು ಎಂದರು. ರಾಜಿಯಾಗುವ ತನಕ ಸಿನಿಮಾ ಆಫರ್ ಸಿಗುವುದಿಲ್ಲ ಎಂದು ಮಾತನಾಡಿದರು. ನಾನು ಆಗ ಚಿಕ್ಕವನಾಗಿದ್ದೆ. ಆತ ನನ್ನ ಹತ್ತಿರಕ್ಕೆ ಬಂದ. ಆಗ ನಾನು ಇದಕ್ಕೆಲ್ಲ ಸಿದ್ಧನಿಲ್ಲ ಅಂತ ಹೇಳಿದಕ್ಕೆ, ನನ್ನ ವೃತ್ತಿಜೀವನವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾನು ಅದಕ್ಕೆಲ್ಲ ಹೆದರಿಕೊಳ್ಳದೆ ಅವರ ಮನೆಯಿಂದ ಹೊರಬಂದೆ ಎಂದು ಸಿದ್ಧಾಂತ್ ಕಾರ್ಣಿಕ್ ಮಾತನಾಡಿದ್ದಾರೆ.


ಅಂದಹಾಗೆ, ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಎದುರು ಸಿದ್ಧಾಂತ್ ವಿಲನ್ ಆಗಿ ನಟಿಸಿದ್ದರು. ಆದಿಪುರುಷ್, ಹೇ ಮೇರಾ ಇಂಡಿಯಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೀರಿಯಲ್‌ನಲ್ಲಿಯೂ ನಟ ಕಾಣಿಸಿಕೊಂಡಿದ್ದಾರೆ.

Share This Article