ಸುದ್ದಿ ಕೇಳಿ ನನಗೆ ಶಾಕ್ ಆಗಿದೆ- ಬಿಜೆಪಿ ಮುಖಂಡ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ನಟಿ ಪೂಜಾಗಾಂಧಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ರೂಂ ಬುಕ್ ಮಾಡಿ ಹಣ ಪಾವತಿಸದೇ ಸಿಲುಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ. ಉದ್ದೇಶಪೂರ್ವಕವಾಗಿಯೇ ನನ್ನನ್ನ ಯಾಕೆ ತಗೊಂಡ್ರು. ನನಗೆ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕವೇ ಈ ವಿಚಾರ ತಿಳಿಯಿತು. ಈ ವಿಚಾರದ ಬಗ್ಗೆ ನಾನು ಚೆಕ್ ಮಾಡುತ್ತೇನೆ ಅಂದ್ರು.

ಅಲ್ಲದೆ 23 ಲಕ್ಷ ರೂ ಕಟ್ಟುವಷ್ಟು ನಾನು ದೊಡ್ಡವನಲ್ಲ. ಅದು ಯಾರದ್ದೋ, ಏನೋ, ಎಂತದ್ದೋ.. ಆದ್ರೆ ನನ್ನ ಯಾಕೆ ತಗ್ಲಾಕ್ಕುತ್ತಾರೆ ಎಂದು ಗೊತ್ತಿಲ್ಲ. ಯಾವ ಉದ್ದೇಶ ಹಾಗೂ ನನ್ನ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ಮಾಡಲಾಗುತ್ತಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ರು. ಇದನ್ನೂ ಓದಿ: ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

ನಾನು ಹೋಟೆಲ್ ಗೆ ಹೋಗಿಯೇ ಇಲ್ಲ. ಬೇಕಾದ್ರೆ ನೀವೇ ಪರಿಶೀಲನೆ ಮಾಡಿಕೊಳ್ಳಿ. ನಿಮಗೆ ಬೇಕಾದ್ದನ್ನು ನೀವೇ ವೆರಿಫೈ ಮಾಡಿಕೊಳ್ಳಿ. ನಾನು ಎಲ್ಲಿಯೂ ಹೋಗಿಲ್ಲ. ನನಗೆ ನನ್ನದೇ ಆದ ಆಫೀಸ್, ಮನೆ ಇದೆ. ಒಳ್ಳೆಯ ಸಂಸಾರ ಇದೆ. ಹೀಗಾಗಿ ಮನೆ, ಆಫೀಸ್ ಬಿಟ್ಟರೆ ನಾನು ಎಲ್ಲಿಗೂ ಹೋಗಲ್ಲ ಅಂದ್ರು.

ಏನಿದು ಪ್ರಕರಣ..?
ನಟಿ ಪೂಜಾಗಾಂಧಿ ಅವರು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ 1 ವರ್ಷ ಹೋಟೆಲ್ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷದ ಹೊಟೇಲ್ ಬಿಲ್ ಒಟ್ಟು 26 ಲಕ್ಷ ಆಗಿತ್ತು. ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಅನ್ನೋದಕ್ಕೆ ನಿಮ್ಮಲ್ಲಿ ಸಾಕ್ಷಿ ಇದ್ಯಾ: ಪೂಜಾ ಗಾಂಧಿ

ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *