ಸೊಸೆ ಮೇಲೆ ಕೋಪಗೊಂಡು 45 ಸುತ್ತು ಪೊಲೀಸರ ಮೇಲೆಯೇ ಗುಂಡು ಹಾರಿಸಿದ ಮಾವ

Public TV
3 Min Read

ಕಾನ್ಪುರ: ಸೊಸೆ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ಪೊಲೀಸರ ಮೇಲೆಯೇ 45 ಸುತ್ತು ಗುಂಡು ಹಾರಿಸುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದಲ್ಲಿ ತನ್ನ ಸೊಸೆಯೊಂದಿಗೆ ಕೋಪಗೊಂಡ ಮಾವ 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು. ಅದು ಕೂಡ ಕೇವಲ 300 ರೂ. ಗೆ ಪತ್ನಿ, ಮಗ ಮತ್ತು ಸೊಸೆಯನ್ನು ರೂಮ್‍ಗೆ ಹಾಕಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾನೆ. ಇದರಿಂದ ಗಾಬರಿಗೊಂಡ ಸೊಸೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಕೌಟುಂಬಿಕ ಕಲಹವೆಂದು ಪರಿಗಣಿಸಿ, ಒಬ್ಬ ಇನ್ಸ್‌ಪೆಕ್ಟರ್ ಮತ್ತು ಕೆಲವು ಕಾನ್‍ಸ್ಟೆಬಲ್‍ಗಳು ಜೀಪಿನಲ್ಲಿ ಸ್ಥಳಕ್ಕೆ ತಲುಪಿದರು.

ಪೊಲೀಸರನ್ನು ನೋಡಿದ ಆತ ಹೆದರಿ ಛಾವಣಿಯ ಮೇಲೆ ಹತ್ತಿದ್ದು, ಅಲ್ಲಿಂದ ಅವನು ತನ್ನ ಪರವಾನಗಿ ಪಡೆದ ಡಬಲ್ ಬ್ಯಾರೆಲ್ ಗನ್‍ನಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಸುಮಾರು ಮೂರು ಗಂಟೆಗಳ ಕಾಲ ಸುಮಾರು 45 ಸುತ್ತು ಗುಂಡು ಹಾರಿಸಿದರು. ಇದರಿಂದ ಇನ್ಸ್‍ಪೆಕ್ಟರ್ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ:  ನಾಳೆ ಫಸ್ಟ್ ಡೇ ಕೆಲಸಕ್ಕೆ ಹೋಗಬೇಕಿದ್ದವ ಮಸಣಕ್ಕೆ – ಅಪಘಾತದಲ್ಲಿ ತಂದೆ, ಮಗ ಸ್ಥಳದಲ್ಲೇ ಮೃತ 

3 ಗಂಟೆಗಳ ನಂತರ, ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಕ್ಯಾಂಟ್ ಮೃಗಾಂಕ್ ಶೇಖರ್ ಪಾಠಕ್, ಎಡಿಸಿಪಿ ರಾಹುಲ್ ಮಿಠಾಯಿ ಮತ್ತು ಆರು ಪೊಲೀಸ್ ಠಾಣೆಗಳ ಪಡೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

ನಡೆದಿದ್ದೇನು?
ಶ್ಯಾಮನಗರದ ಸಿ-ಬ್ಲಾಕ್‍ನ ನಿವಾಸಿ ಆರ್‌ಕೆ ದುಬೆ(60) ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಕಿರಣ್ ದುಬೆ, ಹಿರಿಯ ಮಗ ಸಿದ್ಧಾರ್ಥ್, ಸೊಸೆ ಭಾವನಾ ಮತ್ತು ದಿವ್ಯಾಂಗ್ ಮಗಳು ಚಾಂದಿನಿ ಅವರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಕಿರಿಯ ಮಗ ರಾಹುಲ್ ಮತ್ತು ಸೊಸೆ ಜಯಶ್ರೀ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

photo of indian money - Online Discount Shop for Electronics, Apparel,  Toys, Books, Games, Computers, Shoes, Jewelry, Watches, Baby Products,  Sports & Outdoors, Office Products, Bed & Bath, Furniture, Tools, Hardware,  Automotive

ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದುಬೆ ಅವರು ವಿದ್ಯುತ್ ಬಿಲ್ಲು 300 ರೂ. ನೀಡುವ ವಿಚಾರವಾಗಿ ಸೊಸೆಯೊಂದಿಗೆ ಜಗಳ ಪ್ರಾರಂಭವಾಗಿದೆ. ಇದರಿಂದ ಅತಿರೇಕವಾದ ದುಬೆ ಕೋಪ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆ ಎಂದು ಕಿರುಚಾಡಿದ್ದಾನೆ. ಈ ವೇಳೆ ರಕ್ಷಣೆಗೆ ಬಂದ ಪತ್ನಿ ಮತ್ತು ಮಗನನ್ನು ಸೊಸೆಯೊಂದಿಗೆ ಕೊಠಡಿಗೆ ತೆಳ್ಳಿ ಬೀಗ ಹಾಕಿದ್ದಾನೆ.

ಸೊಸೆ ಪೊಲೀಸರಿಗೆ ಕರೆ
ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದ ಸೊಸೆ ಭಾವನಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾವನಿಂದ ಕುಟುಂಬವನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಚಕೇರಿ ಪೊಲೀಸರು ಮನೆಗೆ ತಲುಪಿದಾಗ, 3 ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು.

ಚಕೇರಿ ಪೊಲೀಸರು ಗುಂಡಿನ ದಾಳಿಯ ಬಗ್ಗೆ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ಪೂರ್ವ ಡಿಸಿಪಿ ಪ್ರಮೋದ್ ಕುಮಾರ್, ಎಸಿಪಿ ಮೃಗಾಂಕ್ ಶೇಖರ್ ಪಾಠಕ್ ಮತ್ತು ಎಡಿಸಿಪಿ ರಾಹುಲ್ ಅವರು ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು. ಇದಾದ ನಂತರವೂ ದುಬೆ ಸುಮ್ಮನಾಗಿಲ್ಲ, ಬದಲಿಗೆ ಪ್ರತಿಯೊಬ್ಬರ ಮೇಲೆಯೂ ಗುಂಡು ಹಾರಿಸುತ್ತಲೇ ಇದ್ದ.

512,465 Phone Screen Stock Photos, Pictures & Royalty-Free Images - iStock

ಇನ್ಸ್‌ಪೆಕ್ಟರ್ ಅಮಾನತು ಮಾಡಿಸಿದ
ದುಬೆ ಸುಮಾರು 3 ಗಂಟೆಗಳಲ್ಲಿ ಪೊಲೀಸರ ಮೇಲೆ 40 ರಿಂದ 45 ಸುತ್ತು ಗುಂಡು ಹಾರಿಸಿದ್ದಾನೆ. ಡಿಸಿಪಿ ಪೂರ್ವ ಡಿಸಿಪಿ ಧ್ವನಿವರ್ಧಕದ ಸಹಾಯದಿಂದ ದುಬೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ದುಬೆ ಡಿಸಿಪಿಗೆ, ಪೊಲೀಸ್ ಇನ್ಸ್‍ಪೆಕ್ಟರ್‌ನನ್ನ ಮನೆಗೆ ಹೇಗೆ ಬಂದರು. ಅವರನ್ನು ಅಮಾನತು ಮಾಡುವವರೆಗೆ ಗುಂಡಿನ ದಾಳಿ ಮುಂದುವರಿಯಲಿದೆ ಎಂದಿದ್ದಾನೆ. ಅದಕ್ಕೆ ದುಬೆಗೆ ಟೈಪ್ ಮಾಡಿದ ಅಮಾನತು ಪತ್ರವನ್ನು ವಾಟ್ಸಾಪ್ ಸಂಖ್ಯೆಗೆ ಡಿಸಿಪಿ ಕಳುಹಿಸಿದ್ದಾರೆ. ಅದರ ನಂತರವೇ ಅವರು ಗುಂಡು ಹಾರಿಸುವುದನ್ನು ನಿಲ್ಲಿಸಿದರು. ಇದಾದ ಬಳಿಕ ಪೊಲೀಸ್ ತಂಡ ಆತನನ್ನು ಬಂಧಿಸಿದೆ.

ಡಬಲ್ ಬ್ಯಾರೆಲ್ ಗನ್, 45 ಖಾಲಿ ಚಿಪ್ಪುಗಳು, 60 ಕಾಟ್ರಿಡ್ಜ್‌ಗಳು ಪತ್ತೆ
ದುಬೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಪೊಲೀಸರು ಆತನ ಡಬಲ್ ಬ್ಯಾರೆಲ್ ಗನ್ ವಶಪಡಿಸಿಕೊಂಡರು. ಮನೆಯನ್ನು ಪರಿಶೀಲಿದ ವೇಳೆ, ಛಾವಣಿ ಮೇಲೆ ಸುಮಾರು 45 ಖಾಲಿ ಚಿಪ್ಪುಗಳು ಮತ್ತು 60ಕ್ಕೂ ಹೆಚ್ಚು ಕಾಟ್ರಿಡ್ಜ್‌ಗಳು ಕಂಡುಬಂದಿವೆ. ದುಬೆ ಬಳಿಯೂ ರಿವಾಲ್ವರ್ ಇದೆ ಎಂದು ಮಗ ಮತ್ತು ಸೊಸೆ ಹೇಳಿದ್ದಾರೆ. ಪೊಲೀಸರು ಮನೆಯನ್ನೆಲ್ಲ ಹುಡುಕಿದರೂ ರಿವಾಲ್ವರ್ ಪತ್ತೆಯಾಗಿರಲಿಲ್ಲ. ಇದೀಗ ರಿವಾಲ್ವರ್ ವಶಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ:  ಗೋಮಾಂಸ ಅಂಗಡಿಗಳ ಮೇಲೆ ಪೊಲೀಸರ ದಾಳಿ: 50 ಕೆಜಿ ಗೋಮಾಂಸ ವಶ, 29 ಹಸುಗಳ ರಕ್ಷಣೆ 

ಮೂರು ತಿಂಗಳಿಂದ ಹಿರಿಯ ಮಗ, ಸೊಸೆ ಜೊತೆ ಜಗಳ
ಆರೋಪಿ ದುಬೆ ಪೊಲೀಸರಿಗೆ, ಹಿರಿಯ ಮಗ ಸಿದ್ಧಾರ್ಥ್ ಪತ್ನಿ ಭಾವನಾ ನನಗೆ ಕಿರುಕುಳ ನೀಡುತ್ತಾಳೆ. ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಕೆಯ ಕುಟುಂಬದವರೂ ನನಗೆ ಕಿರುಕುಳ ನೀಡುತ್ತಾರೆ. ಮೂರು ತಿಂಗಳ ಹಿಂದೆ ನಾನು ಪೊಲೀಸರಿಗೆ ದೂರು ನೀಡಿದ್ದೆ ಆದರೆ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *