ಸಾಲ ಪಾವತಿಸದ್ದಕ್ಕೆ ಸಿಟ್ಟು – ಮಹಿಳೆಯ ಅಪ್ರಾಪ್ತೆ ಮಗಳನ್ನು ತನ್ನ ಮಗನ ಜೊತೆ ಮದ್ವೆ ಮಾಡಿಸಿದ್ಳು!

Public TV
1 Min Read

ಬೆಳಗಾವಿ:  ಕೊಟ್ಟ ಸಾಲಕ್ಕೆ ಸರಿಯಾಗಿ ಬಡ್ಡಿ (Interest) ಕಟ್ಟದ್ದಕ್ಕೆ ಸಾಲ ಪಡೆದ ಮಹಿಳೆಯ ಮಗಳನ್ನು ಮಗನ (Son)  ಜೊತೆ ಮದುವೆ ಮಾಡಿಸಿದ ಘಟನೆ ಬೆಳಗಾವಿಯಲ್ಲಿ (Belagavi) ನಗರ ವ್ಯಾಪ್ತಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

50 ಸಾವಿರ ರೂ. ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದೇ ಇದ್ದಾಗ ಹೆತ್ತಮ್ಮನ ಕಿವಿಯೋಲೆಯನ್ನೂ ಸಹ ಕಸಿದಿರುವ ಕಿರಾತಕಿ ಕಡೆಗೆ ಸಾಲ ಪಡೆದವಳ ಅಪ್ರಾಪ್ತೆಯನ್ನು ತನ್ನ ಮಗನ ಜೊತೆ ಮದುವೆ (Marriage) ಮಾಡಿಸಿದ್ದಾಳೆ.

 

ಮದುವೆಯಾದ ವ್ಯಕ್ತಿ ತನ್ನ ಜೊತೆ ಬಲವಂತದ ದೈಹಿಕ‌ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆ ದೂರಿದ್ದಾಳೆ. ಅನ್ಯಾಯಕ್ಕೊಳಗಾಗಿರುವ ಅಪ್ರಾಪ್ತೆ ತನಗೆ ನ್ಯಾಯ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನೂ ಓದಿ: ಒಬಿಸಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಕೊಕ್ಕೆ?- ವಿದ್ಯಾರ್ಥಿವೇತನ ಬಾರದೇ ವಿದ್ಯಾರ್ಥಿಗಳು ಪರದಾಟ

ಬಲವಂತದ ಮದುವೆ ಮಾಡಿಸಿದ ಅತ್ತೆ, ಮಾವ ಹಾಗೂ ಬಲವಂತದ ದೈಹಿಕ ಸಂಪರ್ಕ ಸಾಧಿಸಿದ ಗಂಡನ ವಿರುದ್ಧ ಟಿಳಕವಾಡಿ ಪೊಲೀಸ್‌ ಠಾಣೆಯನ್ನು ದೂರು ದಾಖಲಿಸಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಜ.17 ರಂದು ಖುದ್ದು ಅಪ್ರಾಪ್ತೆ ದೂರು ನೀಡಿದ್ದಾಳೆ. ಆಕೆಯ ತಾಯಿ ಮಾಡಿದ ಸಾಲಕ್ಕೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ದೂರಿದ್ದಾಳೆ.‌ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು ಸದ್ಯ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಪ್ರಾಪ್ತೆ ಓದಬೇಕು ಎಂದು ಆಸೆ ಪಟ್ಟಿದ್ದಾಳೆ. ಆಕೆಯನ್ನು ಈಗ ರಕ್ಷಿಸಲಾಗಿದೆ. ಅಪ್ರಾಪ್ತೆಯ ಜೊತೆಗೆ ನಾವೂ ಸಹ ಮಾತನಾಡಿದ್ದೇವೆ. ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

 

Share This Article