ನಪುಂಸಕ ಎಂದ ಪತ್ನಿ – ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನ ಮಾವನಿಗೆ ಕಳಿಸ್ದ!

Public TV
2 Min Read

ಹೈದರಾಬಾದ್: ಮಹಿಳೆಯೊಬ್ಬರು ಪತಿಗೆ ನಪುಂಸಕ ಎಂದಿದ್ದಕ್ಕೆ ಪತಿ ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ತನ್ನ ಮಾವನಿಗೆ ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಿಬಾವಾಸು ಬಂಧಿತ ಆರೋಪಿ. ಈಗ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದು ಜೈಲಿಗೆ ಕಳುಹಿಸಿದ್ದಾರೆ. ಪತ್ನಿ ತನ್ನ ಪತಿ ನಪುಂಸಕ ಎಂದು ವಿಚ್ಛೇದನ ಪಡೆಯಲು ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಆದರೆ ಇದರಿಂದ ಕೋಪಕೊಂಡ ಆರೋಪಿ ವಿಬಾವಾಸು ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಡಿ. ಚೈತ್ರಾ ಅವರು ಹೇಳಿದ್ದಾರೆ.

ಏನಿದು ಪ್ರಕರಣ?
ಹೈದರಾಬಾದ್ ನ ಲಾಲ್ ಬಹದ್ದೂರ ನಗರದ ನಿವಾಸಿ ವಿಬಾವಾಸು ಮತ್ತು ಮುತಾಮಿಜ್ ನಗರ ನಿವಾಸಿ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) 2016 ರಲ್ಲಿ ಮದುವೆಯಾಗಿತ್ತು. ಎರಡು ಕುಟುಂಬದವರು ನೋಡಿ ಒಪ್ಪಿ ಮದುವೆ ಮಾಡಿದ್ದರು. ಆದರೆ ಈ ದಂಪತಿ ಮದುವೆಯಾಗಿ ಕೇವಲ 15ದಿನಗಳ ಮಾತ್ರ ಜೊತೆಯಲ್ಲಿದ್ದರು. ಆದರೆ ಪದೇ ಪದೇ ಇಬ್ಬರು ಜಗಳ ಮಾಡುತ್ತಿದ್ದರು. ಇದರಿಂದ ಪತ್ನಿ ಮೀನಾಕ್ಷಿ ತನ್ನ ತವರು ಮನೆಗೆ ಹಿಂದಿರುಗಿದ್ದರು. ನಂತರ ಎರಡೂ ಕುಟುಂಬದವರು ಅವರಿಗೆ ಬುದ್ಧಿ ಹೇಳಿ ಒಂದು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ.

ಕೊನೆಗೆ ಮೀನಾಕ್ಷಿ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿದ್ದರು. ಆಗ ಪತ್ನಿ ಮೀನಾಕ್ಷಿ ಕೋರ್ಟ್ ನಲ್ಲಿ ಎಲ್ಲರ ಮುಂದೆ ನನ್ನ ಪತಿ ನಪುಂಸಕ ಎಂದು ಕಾರಣ ಕೊಟ್ಟಿದ್ದಾರೆ. ಪತ್ನಿ ಹೇಳಿದ ಕಾರಣವನ್ನು ಕೇಳಿದ ವಿಬಾವಾಸು ಕೋಪಗೊಂಡು ಇನ್ನೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಅದನ್ನು ಬೇರೆಯವರ ಕೈಯಲ್ಲಿ ರೆಕಾರ್ಡ್ ಮಾಡಿಸಿದ್ದಾನೆ. ಬಳಿಕ ಆ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮಗೆ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿಬಾವಾಸು ಕಳುಹಿಸಿದ್ದ ವಿಡಿಯೋವನ್ನು ನೋಡಿದ ತಕ್ಷಣ ತಂದೆ ಮತ್ತು ಚಿಕ್ಕಮ್ಮ ಕೂಡಲೇ ಚೆನ್ನೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿ ವಿಚಾರಣೆ ವೇಳೆ ತಾನೇ ವಿಡಿಯೋ ಮಾಡಿ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸದ್ಯಕ್ಕೆ ಆರೋಪಿಯ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಕಿರುಕುಳ, ಅಶ್ಲೀಲ ವಿಡಿಯೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಜೈಲಿಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *