ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

Public TV
1 Min Read

ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ ಶುರುವಾಗಿದ್ದು, ಒಬ್ಬೊಬ್ಬರಾಗಿ ಬಿಗ್ ಹೌಸ್‌ಗೆ ಕಾಲಿಡುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಧಾರಾವಾಹಿಯ ನಿರೂಪಕಿ ಜಾನ್ಹವಿ ಹಾಗೂ ಗೀತಾ ಸೀರಿಯಲ್ ನಟ ಧನುಷ್ ಒಂಟಿಯಾಗಿ ಕಾಲಿಟ್ಟಿದ್ದಾರೆ.

ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಜಾನ್ಹವಿ, ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಶೋವೊಂದರ ನಿರೂಕಪಿಯಾಗಿ ನಂತರ ಸಿನಿಮಾದಲ್ಲಿಯೂ ನಟನೆಗೆ ಅವಕಾಶ ಕೂಡ ಸಿಕ್ಕಿತ್ತು. ಇದೀಗ ಜೀವನ ಹೊಸ ಅಧ್ಯಾಯಕ್ಕಾಗಿ ನಿರೂಪಕಿ ಜಾನ್ಹವಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನೂ ಗೀತಾ ಧಾರಾವಾಹಿಯಲ್ಲಿ ವಿಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧನುಷ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಕೊತ್ತಲವಾಡಿ ನಟಿ ಕಾವ್ಯ, ಡಾಗ್ ಸತೀಶ್, ಕಾಮಿಡಿ ಕಲಾವಿದ ಗಿಲ್ಲಿ, ಗಿಚ್ಚಿಗಿಲಿಗಿಲಿ ಚಂದ್ರಪ್ರಭಾ, ಮಂಜು ಭಾಷಿಣಿ, ಮನದ ಕಡಲು ನಟಿ ರಾಶಿಕಾ ಶೆಟ್ಟಿ, ಅಭಿಷೇಕ್‌, ಲಕ್ಷಣ ಧಾರಾವಾಹಿಯ ಮೌರ್ಯ ಎಂಟ್ರಿ ಕೊಟ್ಟಿದ್ದಾರೆ.

Share This Article