ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ: ಅಪ್ಪು ಕುರಿತು ಅನುಶ್ರೀ ಭಾವುಕ ಪೋಸ್ಟ್

Public TV
1 Min Read

ಪುನೀತ್‌ ರಾಜ್‌ಕುಮಾರ್‌‌ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 3 ವರ್ಷಗಳು ಕಳೆದಿವೆ. ಇದೀಗ ಅವರ ಪುಣ್ಯಸ್ಮರಣೆಯಂದು ಆ್ಯಂಕರ್ ಅನುಶ್ರೀ (Anushree) ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ ಎಂದು ಅಪ್ಪು ಅವರನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ:ಅಪ್ಪು ಪುಣ್ಯಸ್ಮರಣೆ: ನಿಮ್ಮ ಅಭಿಮಾನಿ ಎಂದು ಭಾವುಕ ಪೋಸ್ಟ್‌ ಹಂಚಿಕೊಂಡ ಶ್ರೀದೇವಿ ಭೈರಪ್ಪ

ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿವೆ.ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ. ಮಿಸ್ ಯೂ ಅಪ್ಪು ಸರ್ ಎಂದು ಬರೆದಿದ್ದಾರೆ. ನೀವಿಲ್ಲದೆ ಅಭಿಮಾನ ಇಲ್ಲ. ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.


ಇನ್ನೂ ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಅಪ್ಪು ಅಗಲಿಕೆಯ ನೋವು ಇಂದಿಗೂ ಅವರನ್ನು ಕಾಡುತ್ತಿದೆ. ಇದೀಗ ಅವರು ಬರೆದಿರುವ ಭಾವನ್ಮಾತಕ ಸಾಲುಗಳನ್ನು ನೋಡಿ ಫ್ಯಾನ್ಸ್‌ ಕೂಡ ಭಾವುಕರಾಗಿದ್ದಾರೆ.

Share This Article