ಪವನ್ ಕಲ್ಯಾಣ್ ಜೊತೆ ಸೊಂಟ ಬಳುಕಿಸಲಿದ್ದಾರೆ ‘ಪುಷ್ಪ 2’ ನಟಿ

Public TV
1 Min Read

ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ (Pawan Kalyan) ರಾಜಕೀಯ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಿನಿಮಾ ಕೆಲಸ ಕೂಡ ಪೂರ್ಣಗೊಳಿಸಿಬೇಕಿದೆ. ಈಗ ಪವನ್ ಕಲ್ಯಾಣ್ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಪವನ್‌ ಕಲ್ಯಾಣ್‌ ಜೊತೆ ನಟಿ ಅನಸೂಯ (Anasuya) ಸೊಂಟ ಬಳುಕಿಸಲಿದ್ದಾರೆ.

ವೇದಿಕೆಯೊಂದರಲ್ಲಿ ‘ಪುಷ್ಪ’ ನಟಿ ಅನಸೂಯ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಈ ವಿಚಾರವನ್ನು ರಿವೀಲ್ ಮಾಡುತ್ತಿದ್ದೇನೆ. ನಾನು ಪವನ್ ಸರ್ ಜೊತೆ ಡ್ಯಾನ್ಸ್ ಮಾಡಲಿದ್ದೇನೆ. ಈ ಸಾಂಗ್ ಬಿಗ್ ಸ್ಕ್ರಿನ್‌ನಲ್ಲಿ ಅಬ್ಬರಿಸಲಿದೆ ಎಂದು ಹೇಳಿದ್ದಾರೆ. ಆದರೆ, ಅವರು ಹೆಜ್ಜೆ ಹಾಕೋದು ಯಾವ ಸಿನಿಮಾದಲ್ಲಿ ಎಂಬುದನ್ನು ರಿವೀಲ್ ಮಾಡಿಲ್ಲ. ಇದನ್ನೂ ಓದಿ:ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾಗೆ ಡಾಲಿ ನೋ ಎಂದಿದ್ದೇಕೆ?

ಇನ್ನೂ ‘ಉಸ್ತಾದ್ ಭಗತ್ ಸಿಂಗ್’, ‘ಒಜಿ’, `ಹರಿ ಹರ ವೀರ ಮಲ್ಲು’ ಸಿನಿಮಾಗಳು ಪವನ್ ಕೈಯಲ್ಲಿವೆ. ಈ ಪ್ರಾಜೆಕ್ಟ್‌ಗಳಲ್ಲಿ ಯಾವುದು ಅನಸೂಯ ಹೇಳ್ತಿರುವ ಚಿತ್ರ ಎಂಬುದನ್ನು ಕಾದುನೋಡಬೇಕಿದೆ.

ಇನ್ನೂ ‘ಪುಷ್ಪ’ ಸಿನಿಮಾದ ಮೂಲಕ ಅನಸೂಯ ಜನಪ್ರಿಯತೆ ಸಿಕ್ಕಿದೆ. ‘ಪುಷ್ಪ 2’ಗಾಗಿ ನಟಿ ಎದುರು ನೋಡ್ತಿದ್ದಾರೆ. ಪಾರ್ಟ್ 2ನಲ್ಲಿ ಅನಸೂಯ ಪಾತ್ರ ಖಡಕ್ ಆಗಿ ತೋರಿಸಲಾಗಿದೆ.

Share This Article