Pushpa 2: ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್

Public TV
1 Min Read

ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಸಿನಿಮಾತಂಡದಿಂದ ಇದೀಗ ಅಪ್‌ಡೇಟ್ ಸಿಕ್ಕಿದೆ. ನಟಿ ಕಮ್ ನಿರೂಪಕಿ ಅನಸೂಯಾ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪುಷ್ಪ 2 ಚಿತ್ರದ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಇದನ್ನೂ ಓದಿ:ಕಾನ್ಸ್ ರೆಡ್ ಕಾರ್ಪೆಟ್- ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡಿದ ಊರ್ವಶಿ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಟೀಮ್‌ನಿಂದ ನಟಿ ಅನಸೂಯಾ ಭಾರದ್ವಾಜ್‌ಗೆ (Anasuya Bharadwaj) ಭರ್ಜರಿ ಗಿಫ್ಟ್ ಸಿಕ್ಕಿದೆ. ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದಲ್ಲಿ ಹೀರೋ ಅಲ್ಲು ಅರ್ಜುನ್‌ಗೆ (Allu Arjun) ಅನಸೂಯಾ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಜೊತೆಗೆ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ.

‘ಪುಷ್ಪ 2’ ಇದೇ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

Share This Article