ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

Public TV
1 Min Read

ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ (Ananya Panday) `ಲೈಗರ್’ ಚಿತ್ರದ ಸೋಲಿನ ನಂತರ ಇಟಲಿಗೆ ಹಾರಿದ್ದಾರೆ. ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 

View this post on Instagram

 

A post shared by Ananya ???????? (@ananyapanday)

ಹಿಂದಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಅನನ್ಯಾ ಪಾಂಡೆ `ಲೈಗರ್’ (Liger Film) ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ವಿಜಯ್ ದೇವರಕೊಂಡಗೆ(Vijay Devarakonda) ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಸೋತಿತ್ತು. ಈ ಸೋಲಿನ ಬೆನ್ನಲ್ಲೇ ನಟಿ ಇಟಲಿಗೆ ಹಾರಿದ್ದಾರೆ. ಸಖತ್ ಬೋಲ್ಡ್ ಆಗಿ ಬಿಕಿನಿಯಲ್ಲಿ ಅನನ್ಯಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾ ಸೆಟ್‌ಗೆ ಆಗಮಿಸಿದ್ದಕ್ಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ ರಾಣಿ ಎಲಿಜಬೆತ್

View this post on Instagram

 

A post shared by Ananya ???????? (@ananyapanday)

ಇಟಲಿಯ ಸಮುದ್ರದಲೆಗಳ ಮಧ್ಯೆ ಬಿಕಿನಿಯಲ್ಲಿ ಹಾಟ್ ಆಗಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಅನನ್ಯಾ ಅವರ ಬ್ಯೂಟಿ ನೋಡಿ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

 

View this post on Instagram

 

A post shared by Ananya ???????? (@ananyapanday)

ಇನ್ನೂ ಲೈಗರ್ ಚಿತ್ರದ ನಂತರ ನಟಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಬರಲಿವೆ ಎಂದು ಹೇಳಲಾಗಿತ್ತು. ಈ ಚಿತ್ರದಲ್ಲಿ ಅನನ್ಯಾ ನಟನೆ ನೋಡಿ ಸಪ್ಪೆ ಎಂದಿದ್ದರು. ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ನೆಲೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಅನನ್ಯಾ ಯಾವ ಬಗೆಯ ಪಾತ್ರದಲ್ಲಿ, ಯಾವ ರೀತಿ ಸಿನಿಮಾಗಳ ಮೂಲಕ ಸೌಂಡ್ ಮಾಡಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *