ಎಸ್‌ಐಟಿ ಕಚೇರಿ ಕದ ತಟ್ಟಿದ ಸುಜಾತ ಭಟ್ – ಅನನ್ಯಾ ಸೃಷ್ಟಿಕರ್ತೆಗೆ 6 ಗಂಟೆ ಗ್ರಿಲ್

Public TV
2 Min Read

– ಇಂದು ಮತ್ತೆ ವಿಚಾರಣೆ

ಮಂಗಳೂರು: ಎಸ್‌ಐಟಿ (SIT) ಕಚೇರಿಯ ಕದ ತಟ್ಟಿದ್ದ ಅನನ್ಯಾ ಭಟ್ (Ananya Bhat Missing Case) ನಕಲಿ ಸೃಷ್ಟಿಕರ್ತೆ ಸುಜಾತ ಭಟ್ (Sujatha Bhat) ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಇಲ್ಲದಿದ್ದ ಕಾರಣ ಪ್ರಾಥಮಿಕ ತನಿಖೆ ನಡೆಸಿ ಕಳುಹಿಸಲಾಗಿದೆ. ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದು, ಇಂದು ಮ್ಯಾಜಿಕ್ ಅಜ್ಜಿಯ ಗ್ರಿಲ್ ನಡೆಯಲಿದೆ.

ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ನಸುಕಿನ ಜಾವ 5 ಗಂಟೆಗೆ ದೂರುದಾರೆ ಸುಜಾತ ಭಟ್ ಎಸ್‌ಐಟಿ ಬಾಗಿಲು ಬಡಿದಿದ್ದಾರೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಎಸ್‌ಐಟಿ ಅಧಿಕಾರಿಗಳು ನಿದ್ದೆಯಲ್ಲಿದ್ದಾಗ ಹಾಜರಾಗಿದ್ದಾರೆ. ವಿಚಾರಣೆಗೆ ಸಮಾಯಾವಕಾಶ ಕೇಳಿದ್ದ ಸುಜಾತ ಆಗಸ್ಟ್ 29ಕ್ಕೆ ಬರ್ತೇನೆ ಅಂತ ಪತ್ರ ಬರೆದಿದ್ದರು. ಆದ್ರೆ ನಸುಕಿನ ಜಾವ ದಿಢೀರ್ ಅಂತ ಎಸ್‌ಐಟಿ ಕಚೇರಿ ಮುಂದೆ ಹಾಜರಾಗಿದ್ರು. ಸುಮಾರು 6 ಗಂಟೆಗಳ ಕಾಲ ಸುಜಾತ ಭಟ್ ವಿಚಾರಣೆ ಎದುರಿಸಿದರು. ಇದನ್ನೂ ಓದಿ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಹೇಗಿತ್ತು ಎಸ್‌ಐಟಿ ವಿಚಾರಣೆ?
ನಿಮ್ಮ ಮಗಳ ಹೆಸರು ಏನು?
ನಿಮ್ಮ ಮಗಳು ನಾಪತ್ತೆಯಾಗಿದ್ದು ಯಾವಾಗ?
ನಿಮ್ಮ ಮಗಳ ಫೋಟೋ/ ದಾಖಲೆ ಇದ್ಯಾ?
ನಿಮ್ಮ ಮಗಳು ಓದಿದ್ದು ಎಲ್ಲಿ? ಯಾವ ವರ್ಷ?
ಇಷ್ಟು ವರ್ಷ ಯಾಕೆ ದೂರು ಕೊಡಲಿಲ್ಲ?
ನಿಮಗೆ ಯಾರಾದ್ರೂ ಒತ್ತಡ ಹಾಕಿದ್ದಾರಾ?
ದೂರು ಕೊಡುವ ಮೊದಲು ಯಾರಾದ್ರೂ ಭೇಟಿ ಆಗಿದ್ರಾ?

ಸುಜಾತ ಭಟ್ ಉತ್ತರಗಳೇನು?
ನನ್ನ ಹೆಸರು ಸುಜಾತ ಭಟ್; ಮಗಳು ಅನನ್ಯಾ ಭಟ್.
ಅನನ್ಯ ಭಟ್ ಇದ್ದಿದ್ದು ನಿಜ, ಕಾಲ್ಪನಿಕ ಅಲ್ಲ.
2003ರಲ್ಲಿ ನನ್ನ ಮಗಳು ಮೆಡಿಕಲ್ ಓದುತ್ತಿದ್ದಳು.
ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಿದಾಗ ನಾಪತ್ತೆಯಾಗಿದ್ದಳು.
ನನ್ನ ಮಗಳು ಸತ್ತು ಹೋಗಿದ್ದಾಳೆ.
ಮಗಳ ಅಸ್ಥಿ ಸಿಕ್ಕರೆ ಕೊಡುವಂತೆ ದೂರು ನೀಡಿದ್ದೆ.
ಅನನ್ಯ ಎಂಬಿಬಿಎಸ್ ಓದಿದ ದಾಖಲೆ ಕಳವಾಗಿದೆ.
ಮನೆಗೆ ಬೆಂಕಿ ಹಚ್ಚಿ ದಾಖಲೆ ನಾಶಪಡಿಸಿದ್ದಾರೆ.
ಸೂರತ್ಕಲ್‌ನಲ್ಲಿರುವ ಮನೆಯನ್ನು ಸುಟ್ಟು ಹಾಕಿದ್ದಾರೆ.
ನನ್ನ ಹತ್ತಿರ ಯಾವುದೇ ದಾಖಲೆಗಳು ಇಲ್ಲ.

ಇಂದು ಮತ್ತೆ ಸುಜಾತ ಭಟ್ ವಿಚಾರಣೆ:
ಮಂಗಳವಾರ ಅಲ್ಪಮಟ್ಟಿಗೆ ವಿಚಾರಣೆ ಎದುರಿಸಿರೋ ಸುಜಾತಾ ಭಟ್‌ಗೆ ಇಂದು ಕೂಡ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸುಜಾತ್ ಭಟ್‌ರನ್ನು ವಿಚಾರಣೆ ನಡೆಸಲಿದ್ದಾರೆ. ಸುಜಾತ ಭಟ್ ಹೆಣೆದಿರೋ ಕಥೆಗೆ ಸಂಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಮಾಹಿತಿ ಸಂಗ್ರಹಿಸಿಟ್ಟಿದ್ದರು. ಎಲ್ಲವನ್ನೂ ವಿಚಾರಣೆ ವೇಳೆ ಸುಜಾತ ಭಟ್ ಮುಂದಿಡಲು ಎಸ್‌ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಅನನ್ಯಾ ಭಟ್ ನನ್ನ ಮಗಳು ಎಂದಿದ್ದ ಸುಜಾತ ಭಟ್ ಮತ್ಯಾವ ಟ್ವಿಸ್ಟ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಭಾರತದ ಈ ಹಳ್ಳಿಯ ಮನೆಗಳಲ್ಲಿ ಅಡುಗೆ ಮನೆಯೇ ಇಲ್ಲ – ಕಾರಣ ಏನು? ಆಹಾರ ಸೇವನೆ ಹೇಗೆ?

Share This Article